
ನಾಪೋಕ್ಲು ಜು.21 : ಲಾರಿಯೊಂದು ಚಾಲಕನ
ನಿಯಂತ್ರಣ ತಪ್ಪಿ ಹಿಂದಕ್ಕೆ ಪಲ್ಟಿಯಾಗಿ
ಬಿದ್ದಿರುವ ಘಟನೆ ನಾಪೋಕ್ಲು-ಮಡಿಕೇರಿ
ಮುಖ್ಯರಸ್ತೆಯ ಅಪ್ಪಂಗಳದಲ್ಲಿ ನಡೆದಿದೆ.
ನಾಪೋಕ್ಲುವಿನಿಂದ ಕುಶಾಲನಗರಕ್ಕೆ ಕಾಫಿ
ಸಾಗಿಸುತ್ತಿದ್ದ ಲಾರಿ ಅಪ್ಪಂಗಳದ ಏಲಕ್ಕಿ
ಸಂಶೋಧನಾ ಕೇಂದ್ರದ ಬಳಿ ಹಿಂದಕ್ಕೆ ಚಲಿಸಿ
ರಸ್ತೆಯಂಚಿಗೆ ಬಿದ್ದಿದ್ದು, ಚಾಲಕ ಹಾಗೂ
ಸಹಾಯಕ ಅಪಾಯದಿಂದ ಪಾರಾಗಿದ್ದಾರೆ.



