ಸಾಲದ ಬಾದೆ ರೈತ ಆತ್ಮಹತ್ಯೆಗೆ ಯತ್ನ: ಆಸ್ಪತ್ರೆಗೆ ಸಂಸದ ನಳಿನ್ ,ಶಾಸಕ ರಾಜೇಶ್ ನಾಯ್ಕ್ ಬೇಟಿ.

ಸಾಲದ ಬಾದೆ ರೈತ ಆತ್ಮಹತ್ಯೆಗೆ ಯತ್ನ: ಆಸ್ಪತ್ರೆಗೆ ಸಂಸದ ನಳಿನ್ ,ಶಾಸಕ ರಾಜೇಶ್ ನಾಯ್ಕ್ ಬೇಟಿ.

ಬಂಟ್ವಾಳ; ಸಾಲ ಮರುಪಾವತಿ ಮಾಡಿ, ತಪ್ಪಿದ್ದಲ್ಲಿ ಏಲಂಗೆ ಮುಂದಾಗುವ ಬಗ್ಗೆ ಬ್ಯಾಂಕ್ ನೋಟಿಸ್ ನೀಡಲು ಮುಂದಾಗಿದೆ ಎಂದು ಸುದ್ದಿ ತಿಳಿದ ರೈತನೋರ್ವ ಮಾಡದ ತಪ್ಪಿಗೆ ಮನನೊಂದು ಆತ್ಮಹತ್ಯೆ ಗೆ ಯತ್ನಿಸಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಶುಕ್ರವಾರ ತಡರಾತ್ರಿ ವೇಳೆ ನಡೆದಿದೆ.

ಕಾವಳಮೂಡೂರು ಪಂಜಾಡಿ ನಿವಾಸಿ ಗುರು ಪ್ರಸಾದ್ ಅವರು ಆತ್ಮ ಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದು,
ದೀಪಾ ಪ್ರಭು ಅವರು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಕಾವಳಮೂಡೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಸದಸ್ಯರಾಗಿರುವ ಗುರುಪ್ರಸಾದ್ ಇವರ ಹೆಸರಿನಲ್ಲಿ ಅವರಿಗೆ ತಿಳಿಯದಂತೆ ಪ್ರಭಾವಿಗಳು ಪೋರ್ಜರಿಯಾಗಿ ಲೋನ್ ಪಡೆದು ಈಗ ಎಲಂ ನೊಟೀಸ್ ನೀಡಿದ್ದಾರೆ ಎಂದು ತಿಳಿದ ಅವರು ನೊಂದು ಆತ್ಮಹತ್ಯೆಗೆ ಪ್ರಯತ್ನಿಸಿ ಕೆ.ಎಂ.ಸಿ ಆಸ್ಪತ್ರೆಯಲ್ಲಿ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಸ್ವತಃ ಗುರುಪ್ರಸಾದ್ ಒಂದು ವಿಡಿಯೋ ಕೂಡ ಮಾಡಿದ್ದು, ಅದರಲ್ಲಿ ನಾನು ಯಾವುದೇ ಸಾಲ ಮಾಡಿಲ್ಲ.ಆದರೆ ನನ್ನ ಹೆಸರನ್ನು ಬಳಸಿಕೊಂಡು ಕೆಲವರು ಹೆಸರನ್ನು ಉಲ್ಲೇಖಮಾಡಿದ್ದು, ಅವರು ಸಾಲ ಮಾಡಿದ್ದಾರೆ , ಆದರೆ ಪ್ರಸ್ತುತ ಅವರನ್ನು ಸಾಲಕಟ್ಟದೆ ನನಗೆ ತೊಂದರೆಯಾಗಿದೆ.

ಲಕ್ಷಾಂತರ ರೂ ಸಾಲವನ್ನು ಬಡ ರೈತನಾಗಿರುವ ನನ್ನಿಂದ ಕಟ್ಟಲು ಸಾಧ್ಯವಿಲ್ಲ. ನಾನು ಏನು ಮಾಡದ ಸ್ಥಿತಿಯಲ್ಲಿದ್ದೇನೆ ಎಂದು ವಿಡಿಯೋ ದಲ್ಲಿ ಇದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗುರು ಪ್ರಸಾದ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ,ಪ್ರಮುಖರಾದ ಹರಿಕೃಷ್ಣ ಬಂಟ್ವಾಳ್, ಸುದರ್ಶನ್ ಬಜ, ಅಜಿತ್ ಶೆಟ್ಟಿ ಮತ್ತು ಬಿಜೆಪಿ ಪ್ರಮುಖರು ಭೇಟಿಯಾಗಿ ಧೈರ್ಯ ತುಂಬಿದ್ದು. ಈ ಸೊಸೈಟಿಯ ಅವ್ಯವಹಾರದ ಬಗ್ಗೆ ನೂರಾರು ದೂರು ಬಂದಿರುವ ಕಾರಣ ಪ್ರಕರಣದ ತನಿಖೆ ನಡೆಯುತ್ತಿದೆ.
ಸದ್ಯ ಗುರುಪ್ರಸಾದ್ ಅವರ ಪತ್ನಿ ದೀಪಾ ಅವರು ಪುಂಜಾಲಕಟ್ಟೆ ಪೋಲೀಸ್ ಠಾಣೆಗೆ ದೂರು ನೀಡಿದ್ದು,ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಇಲ್ಲಿನ ಪೋಲೀಸರು ಮಾಹಿತಿ ನೀಡಿದ್ದಾರೆ

ರಾಜ್ಯ