ಸುಳ್ಯ ತಾಲೂಕು ಪಂಚಾಯತ್ ನಲ್ಲಿ ಶಾಸಕಿ ಭಾಗೀರಥಿ ಮುರುಳ್ಯರ ನೇತ್ರತ್ವದಲ್ಲಿ ಪ್ರಾಕೃತಿಕ ವಿಕೋಪ ಮುಂಜಾಗ್ರತಾ ಕುರಿತು ಅಧಿಕಾರಿಗಳ ಸಭೆ.ಅವಘಡಗಳು ಸಂಭವಿಸುವಲ್ಲಿ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಬೇಕು.

ಸುಳ್ಯ ತಾಲೂಕು ಪಂಚಾಯತ್ ನಲ್ಲಿ ಶಾಸಕಿ ಭಾಗೀರಥಿ ಮುರುಳ್ಯರ ನೇತ್ರತ್ವದಲ್ಲಿ ಪ್ರಾಕೃತಿಕ ವಿಕೋಪ ಮುಂಜಾಗ್ರತಾ ಕುರಿತು ಅಧಿಕಾರಿಗಳ ಸಭೆ.ಅವಘಡಗಳು ಸಂಭವಿಸುವಲ್ಲಿ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಬೇಕು.

ಮಳೆಗಾಲದಲ್ಲಿ ಗುಡ್ಡ ಕುಸಿಯುವುದು, ರಸ್ತೆ ಸಮಸ್ಯೆ ಕೆಲವೊಂದು ಅವಘಡಗಳು ಸಂಬಂವಿಸುತ್ತದೆ. ಘಟನೆಯ ವಿಷಯ‌ ತಿಳಿದ ಕೂಡಲೇ ಗ್ರಾಮ ಲೆಕ್ಕಾಧಿಕಾರಿಗಳು, ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲನೆ ನಡೆಸಿ ವರದಿ ನೀಡಬೇಕು. ಅಧಿಕಾರಿಗಳು ಬಂದಿಲ್ಲ ಎಂಬ ದೂರು ಕೇಳಿ ಬರಬಾರದು . ಆದ್ದರಿಂದ ಮಳೆಗಾಲದ ಈ ಸಂದರ್ಭದಲ್ಲಿ ಎಲ್ಲರೂ ಕೇಂದ್ರ ಸ್ಥಾನದಲ್ಲೇ ಇದ್ದು‌ ಎಚ್ಚರದಿಂದಿರಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಸೂಚನೆ ನೀಡಿದ್ದಾರೆ.

ಜು.10 ರಂದು‌ ಬೆಳಗ್ಗೆ ತಾಲೂಕು ಪಂಚಾಯತ್ ನಲ್ಲಿ ಪ್ರಾಕೃತಿಕ ವಿಕೋಪ ಮುಂಜಾಗ್ರತಾ ಕುರಿತು ಅಧಿಕಾರಿಗಳ ಸಭೆ ನಡೆಸಿ ಅವರು ಸೂಚನೆ ನೀಡಿದರು.

ಬಳಿಕ ಮಾತನಾಡಿದ ಶಾಸಕರು ಅವಘಡ ಸಂಬಂಧಿಸಿದ ತಕ್ಷಣ ಅಧಿಕಾರಿಗಳು‌ ಭೇಟಿ ನೀಡಿ ಪರಿಶೀಲನೆ ನಡೆಸಿ, ತಕ್ಷಣ ಏನು ಸ್ಪಂದನೆ ಮಾಡಬೇಕೋ ಅದನ್ನು ಮಾಡಿ. ಅಧಿಕಾರಿಗಳು ಬರುತ್ತಿಲ್ಲ ಎಂಬ ದೂರುಗಳು‌ ನನಗೆ ಬಂದಿದೆ. ಇದುವರೆಗೆ ನೀವು ಹೋಗಿಲ್ಲದಿದ್ದರೆ ಸರಿಯಲ್ಲ. ಆದರೆ‌ ಮುಂದೆ ಈ ರೀತಿ ಆಗಬಾರದು. ಮಳೆಗಾಲದ ಅವಧಿಯಲ್ಲಿ ಸ್ವಲ್ಪ‌ ಹೆಚ್ಚು ಅಲರ್ಟ್ ಆಗಿರಿ‌ಎಂದು‌ಅವರು ಸೂಚನೆ ನೀಡಿದರು.

ನೀರು‌ ಚರಂಡಿಯಲ್ಲೇ ಹರಿಯುವಂತೆ ಮಾಡಿ‌: ಮಳೆ ನೀರು ಚರಂಡಿಯಲ್ಲಿ‌ ಹೋಗಬೇಕು.

ಸುಳ್ಯ‌ನಗರದ ಕಲ್ಲುಮುಟ್ಲು ವ್ಯಾಪ್ತಿ ಗುಡ್ಡ ಜರಿಯುವ ಭೀತಿಯಿತ್ತು. ಇಂಜಿನಿಯರ್ ಗಳು ಬಂದು ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲಿ ಯಾವುದೇ ಹೊಸ ಕನ್‌ಸ್ಟ್ರಕ್ಷನ್ ಮಾಡದಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ಮುಖ್ಯಾಧಿಕಾರಿ ಗಳು ಹೇಳಿದಾಗ, ನೀವು ಈ ಕುರಿತು ನಿಗಾ ವಹಿಸಿ ಎಂದು ಶಾಸಕರು ಸೂಚನೆ ನೀಡಿದರು.

ಕಳೆದ ವರ್ಷದ ಅನುದಾನ ಇನ್ನೂ ಬಂದಿಲ್ಲ: ಸೇತುವೆ, ರಸ್ತೆ ಹಾನಿ ಕುರಿತು ಇದ್ದರೆ ಅದರ ವರದಿ ಕೊಡಿ ಎಂದು ಶಾಸಕರು ಹೇಳಿದರು.ಜಿ.ಪಂ. ಇಂಜಿನಿಯರ್ ಗಳು ಮಾತನಾಡಿ ಈ ವರ್ಷ ಸಣ್ಣ ಪುಟ್ಟ ಕೆಲಸ ನಿರ್ವಹಿಸಿದ್ದೇವೆ. ಆದರೆ ಕಳೆದ ವರ್ಷ ಹಾನಿ ಸಂಬಂಧಿಸಿದ ಕುರಿತು 45 ಕೋಟಿ ಎಸ್ಟಿಮೇಟ್ ಕಳುಹಿಸಿ‌ ಕೊಟ್ಟಿದ್ದೇವೆ. ಆದರೆ ಅನುದಾನ ಬಂದಿಲ್ಲ. 22 ಸೇತುವೆ ರಿಪೇರಿಗೆ 60 ಸಾವಿರದಂತೆ 13 ಲಕ್ಷ ರೂ ಬಂದಿದೆ ಎಂದು‌ ಹೇಳಿದರು.

ತಹಶೀಲ್ದಾರ್ ಮಂಜುನಾಥ್, ಇ.ಒ. ಭವಾನಿಶಂಕರ್ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು, ಪಿ.ಡಿ.ಒ. ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

ರಾಜ್ಯ