
ಉಡುಪಿ ಜುಲೈ 10 : ಅಪಾರ್ಟ್ ಮೆಂಟ್ ವೊಂದರ ಕಿಟಕಿಯ ಫ್ರೇಂ ಒಂದರಲ್ಲಿ ಸಿಲುಕಿಕೊಂಡಿದ್ದ ವಿಶೇಷಚೇತನ ಬಾಲಕನನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಉಡುಪಿಯ ಬ್ರಹ್ಮಗಿರಿಯಲ್ಲಿ ಸಂಭವಿಸಿದೆ.



ವಿಶೇಷಚೇತನನಾಗಿರುವ ಎಂಟು ವರ್ಷದ ಬಾಲಕ ಆರುಷ್ ಅಪಾರ್ಟ್ಮೆಂಟ್‌ನ ೧೦ನೇ ಪ್ಲೋರ್‌ನ ಕಿಟಕಿಯಲ್ಲಿ ಸಿಲುಕಿಕೊಂಡಿದ್ದ . ಈತ ಹನ್ನೊಂದನೇ ಮಹಡಿ ಬಾಲ್ಕನಿ ಮೂಲಕ ಹೊರ ಹೋಗಿ ಹತ್ತನೇ ಪ್ಲೋರ್‌ನ ಕಿಟಕಿ ಪೋರಂನಲ್ಲಿ ಸಿಕ್ಕಿಕೊಂಡು ಅಪಾಯದಲ್ಲಿ ಸಿಲುಕಿದ್ದ. ಮಾಹಿತಿ ದೊರೆತ ತಕ್ಷಣ ಸಕಾಲಕ್ಕೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಾಲಕನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆತಂಕಕ್ಕೆ ಒಳಗಾದ ಆರುಷ್ ಪೋಷಕರು ಯಶಸ್ವಿ ಕಾರ್ಯಚರಣೆಯಿಂದ ನಿಟ್ಟುಸಿರುಬಿಟ್ಟಿದ್ದಾರೆ.