
ಅನುಗ್ರಹ ಎಜುಕೇಶನ್ ಟ್ರಸ್ಟ್, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲಿಜನ್, ಹಾಗೂ ಜೆಸಿಐ ಸುಬ್ರಹ್ಮಣ್ಯ ಕುಕ್ಕೆ ಶ್ರೀ, ಇವರ ಜಂಟಿ ಆಶಯದಲ್ಲಿ ಎಸ್ ಬಿ ಲ್ಯಾಬೋರೇಟರಿ ಇವರ ಸಹಯೋಗದೊಂದಿಗೆ ಕುಮಾರಸ್ವಾಮಿ ವಿದ್ಯಾಲಯದಲ್ಲಿ ವಿಶ್ವ ರಕ್ತದಾನ ದಿನಾಚರಣೆಯ ಅಂಗವಾಗಿ ರಕ್ತ ವರ್ಗಿಕರಣ ಹಾಗೂ ಮಾಹಿತಿ ಶಿಬಿರವನ್ನು ಇಂದು ಬುಧವಾರ ಏರ್ಪಡಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಹಾಗೂ ರಕ್ತ ವರ್ಗಿಕರಣದ ಮಾಹಿತಿಯನ್ನು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಇದರ ಅಧ್ಯಕ್ಷ ವಿಶ್ವನಾಥ ನಡುತೋಟ ನೀಡಿದರು. ವೇದಿಕೆಯಲ್ಲಿ ಕುಮಾರಸ್ವಾಮಿ ವಿದ್ಯಾಲಯದ ಸಂಚಾಲಕ ಚಂದ್ರಶೇಖರ ನಾಯರ್, ಜಿಸಿಐ ಸುಬ್ರಹ್ಮಣ್ಯ ಕುಕ್ಕೆ ಶ್ರೀ ಅಧ್ಯಕ್ಷ ಯೋಗನಾಥ್, ಕುಮಾರಸ್ವಾಮಿ ವಿದ್ಯಾಲಯದ ಮುಖ್ಯ ಶಿಕ್ಷಕಿ ವಿದ್ಯಾರತ್ನ, ಜೆ ಸಿ ಐ ಕಾರ್ಯದರ್ಶಿ ಡಾ1ರಾಜೇಶ್ವರಿ ಹಾಗೂ ಎಸ್. ಬಿ. ಮೆಡಿಕಲ್ ಲ್ಯಾಬೋರೇಟ ಸಿಬ್ಬಂದಿ ವರ್ಗದವರು ಹಾಜರಿದ್ದರು. 88 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳ ರಕ್ತ ವರ್ಗೀಕರಣವನ್ನು ಈ ಸಂದರ್ಭದಲ್ಲಿ ಮಾಡಲಾಯಿತು.


