ಮಡಿಕೇರಿ : ಕರ್ನಾಟಕದ ಮೊದಲ 32 ಮೀ. ಉದ್ದದಗಾಜಿನ ಸೇತುವೆ ಉದ್ಘಾಟನೆ.

ಮಡಿಕೇರಿ : ಕರ್ನಾಟಕದ ಮೊದಲ 32 ಮೀ. ಉದ್ದದ
ಗಾಜಿನ ಸೇತುವೆ ಉದ್ಘಾಟನೆ.

ಮಡಿಕೇರಿ ಹೊರವಲಯದ ಉಡೋತ್
ಮಡಿಕೇರಿ ಮೊಟ್ಟೆಯ ಪಪೀಸ್ ಪ್ಲಾಂಟೇಷನ್‌ನಲ್ಲಿ ಸುಮಾರು 32 ಮೀಟರ್ ಉದ್ದದ 2 ಮೀಟರ್ ಅಗಲದ 78 ಅಡಿ ಎತ್ತರದಲ್ಲಿರುವ ಗ್ಲಾಸ್ ಸ್ಕೈ ವಾಕ್ ಬ್ರಿಡ್ಜ್ ಪ್ರವಾಸಿಗರ ಗಮನ ಸೆಳೆಯುತ್ತಿದೆ. ಸುಮಾರು 5 ಟನ್ ಬಾರ ಹೊರುವ ಸಾಮಥ್ಯದ ಈ ಬ್ರಿಡ್ ಜ್‌ನಲ್ಲಿ ಒಮ್ಮೆಗೆ 40-50 ಮಂದಿ ನಿಂತು ಪ್ರಕೃತಿಯ ಸೌಂದರ್ಯ ಸವಿಯಬಹುದು.


ಇದು ಕರ್ನಾಟಕದ ಮೊದಲ ಉದ್ದದ ಗ್ಲಾಸ್ ಸೇತುವೆಯಾಗಿದ್ದು, ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು. ನಂತರ ಮಾತನಾಡಿದ ಪೊನ್ನಣ್ಣ, ಕೊಡಗು ಪ್ರಕೃತಿ ದತ್ತವಾದ ನಿಸರ್ಗಕ್ಕೆ ಧಕ್ಕೆಯಾಗದ ವಿಚಾರವನ್ನು ಹೊರತುಪಡಿಸಿ ಅಭಿವೃದ್ಧಿ ಪಡಿಸಬೇಕು ಎಂದರು.
ಈ ಅಪರೂಪದ ಯೋಜನೆಯಿಂದ ಜಿಲ್ಲೆಯಲ್ಲು ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ. ಜೊತೆಗೆ ಅವಲಂಭಿತರಿಗೆ ಉದ್ಯೋಗವಕಾಶ ದೊರೆಯಲಿದೆ ಎಂದು ತಿಳಿಸಿದರು.ಕಾರ್ಯಕ್ರಮ ನಿರೂಪಿಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ತೆನ್ನಿರಾ ಮೈನಾ, ಭರತದ ಸ್ಮಾಟ್ ಲ್ಯಾಂಡ್ ದಕ್ಷಿಣದ ಕಾಶ್ಮೀರ ಎಂದು
ಕರೆಸಿಕೊಂಡಿರುವ ಕೊಡಗು ಜಿಲ್ಲೆಯಲ್ಲಿ
ಇಂತಹ ಒಂದು ಅದ್ಭುತ ಯೋಜನೆ ಸ್ಥಾಪಿತವಾಗಿರುವುದು ಪ್ರವಾಸೋದ್ಯಮಕ್ಕೆ
ಅಶಾದಾಯಕ ಬೆಳವಣಿಗೆ ಎಂದು ತಿಳಿಸಿದರು.

ರಾಜ್ಯ