​‘ಅವರು ನಮ್ಮ ಮಕ್ಕಳು, ಕ್ಷಮಿಸೋಣ’: ದೆಹಲಿ ಪ್ರತಿಭಟನೆ ಬಗ್ಗೆ ಪಿಎಂ ಮೋದಿ ಹೇಳಿದ್ದೇನು?

​‘ಅವರು ನಮ್ಮ ಮಕ್ಕಳು, ಕ್ಷಮಿಸೋಣ’: ದೆಹಲಿ ಪ್ರತಿಭಟನೆ ಬಗ್ಗೆ ಪಿಎಂ ಮೋದಿ ಹೇಳಿದ್ದೇನು?

ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಕೆಲ ಯುವಕರು ಹಾಗೂ ಹೆಣ್ಣುಮಕ್ಕಳು ಅಸಭ್ಯ ಹಾಗೂ ನಿಂದನೀಯ ಭಾಷೆ ಬಳಸಿರುವುದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ರೀತಿಯ ನಡೆ ನಾಗರಿಕ ಸಮಾಜಕ್ಕೆ ಶೋಭೆಯಲ್ಲ ಹಾಗೂ ಇದು ಭಾರತೀಯ ಸಂಸ್ಕೃತಿಗೆ ದೊರೆತ ‘ಸಾಂಸ್ಕೃತಿಕ ಆಘಾತ’ ಎಂದು ಅವರು ಬಣ್ಣಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವಿಶೇಷ ವಿಡಿಯೋ ಸಂದೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಬಾಲಾಪರಾಧ ಅಥವಾ ಯೌವನದ ದಿನಗಳಲ್ಲಿ ತಪ್ಪುಗಳು ಸಹಜ. ಆದರೆ, ಆ ತಪ್ಪುಗಳನ್ನು ಶಿಕ್ಷಿಸುವ ಬದಲು, ಕೋರ್ಟ್‌-ಕಚೇರಿ ಅಥವಾ ಸಮಾಜದಲ್ಲಿ ಕಿರುಕುಳ ನೀಡುವ ಬದಲು, ಆ ಮಕ್ಕಳನ್ನು ಕ್ಷಮಿಸಿ ಪ್ರೀತಿಯಿಂದ ಸರಿಹಾದಿಗೆ ತರುವುದು ನಮ್ಮ ಕರ್ತವ್ಯ” ಎಂದು ಕರೆ ನೀಡಿದ್ದಾರೆ.

​‘ನನ್ನ ಅಗಲಿದ ತಾಯಿಗೂ ನಿಂದನೆ, ಆದರೂ ಕ್ಷಮಿಸಲು ಸಿದ್ಧ’​ಪ್ರತಿಭಟನಾ ಸ್ಥಳದಲ್ಲಿ ತಮ್ಮ ವಿರುದ್ಧ ಮಾತ್ರವಲ್ಲದೆ ತಮ್ಮ ಸ್ವರ್ಗಸ್ಥ ತಾಯಿಯ ವಿರುದ್ಧವೂ ಕೆಟ್ಟ ಶಬ್ದಗಳನ್ನು ಬಳಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಪ್ರಧಾನಿ, “ನಿಂದನೆಗಳು ಅಥವಾ ನಿಂದನೀಯ ಮಾತುಗಳು ಎಂದಿಗೂ ಯಾವುದೇ ಸಮಸ್ಯೆಗೆ ಪರಿಹಾರವಾಗುವುದಿಲ್ಲ. ನಮ್ಮ ಹೆಣ್ಣುಮಕ್ಕಳು ಇಂತಹ ಭಾಷೆ ಬಳಸುವುದು ಸಮಾಜಕ್ಕೆ ಆಘಾತಕಾರಿ. ಆದರೆ ಅವರು ದಾರಿ ತಪ್ಪಿದ್ದಾರೆ, ಅವರನ್ನು ಸರಿಯಾದ ಮಾರ್ಗಕ್ಕೆ ತರುವುದು ನಮ್ಮ ಜವಾಬ್ದಾರಿ” ಎಂದರು.

ಪ್ರಧಾನಿ ಮೋದಿಯವರ ಅರ್ಥಪೂರ್ಣ ಉದಾಹರಣೆ:“ಕೆಲವೊಮ್ಮೆ ನಮ್ಮ ಹಲ್ಲುಗಳ ನಡುವೆ ನಾಲಿಗೆ ಸಿಲುಕಿ ರಕ್ತ ಬರಬಹುದು. ಅದಕ್ಕಾಗಿ ನಾವು ಹಲ್ಲನ್ನು ಮುರಿದುಕೊಳ್ಳುವುದಿಲ್ಲ. ಏಕೆಂದರೆ ನಾಲಿಗೆ ಮತ್ತು ಹಲ್ಲು ಎರಡೂ ನಮ್ಮವೇ. ಹಾಗೆಯೇ ಈ ಯುವಜನತೆಯೂ ನಮ್ಮವರೇ.”

NEET ಪರೀಕ್ಷೆಯ ಅಕ್ರಮಗಳ ವಿರುದ್ಧ ನಡೆದ ಪ್ರತಿಭಟನೆ ವೇಳೆ ಕೆಲ ಯುವಕರು ನಿಂದನೀಯ ಹೇಳಿಕೆ ನೀಡಿದ್ದರು. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರೂ, ಪ್ರಧಾನಿ ಮೋದಿಯವರು ತಮ್ಮ ಉದಾರ ಮನಸ್ಸಿನಿಂದ ಆ ಯುವಕರನ್ನು ಕ್ಷಮಿಸಿ, ದೇಶ ನಿರ್ಮಾಣದ ಸರಿಹಾದಿಯಲ್ಲಿ ಮುನ್ನಡೆಯಲು ಮುಕ್ತ ಕರೆ ನೀಡಿದ್ದಾರೆ.

ಅಪರಾಧ ರಾಜಕೀಯ ರಾಷ್ಟ್ರೀಯ ಶೈಕ್ಷಣಿಕ