ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿಭಿನ್ನ ಶೈಲಿಯ ರೀಲ್ಸ್ಗಳ ಮೂಲಕ ಮನೆಮಾತಾಗಿದ್ದ ಮಂಗಳೂರಿನ ವೈರಲ್ ಸ್ಟಾರ್ ಆಶಾ ಪಂಡಿತ್ (ಪಡೀಲ್ದ ಆಶಾಕ್ಕ) ಅವರು ನಿನ್ನೆ ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮಂಗಳೂರಿನ ಪಡೀಲ್ ನಿವಾಸಿಯಾಗಿದ್ದ ಅವರು, ತೀವ್ರ ಸ್ವರೂಪದ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ನಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ಆಶಾ ಪಂಡಿತ್, ಕರಾವಳಿ ಭಾಗದ ಆಡುಭಾಷೆ ಮತ್ತು ಹಾಸ್ಯಭರಿತ ತುಳು ಸಂಭಾಷಣೆಗಳ ಮೂಲಕ ಕರ್ನಾಟಕದಾದ್ಯಂತ ಜನಪ್ರಿಯತೆ ಗಳಿಸಿದ್ದರು. ಅವರ ಅನಿರೀಕ್ಷಿತ ಸಾವು ಸೋಷಿಯಲ್ ಮೀಡಿಯಾ ಲೋಕಕ್ಕೆ ದೊಡ್ಡ ಆಘಾತ ತಂದಿದ್ದು, ಅಭಿಮಾನಿಗಳು ಹಾಗೂ ಕರಾವಳಿಯ ಕಲಾಬಳಗ ಕಂಬನಿ ಮಿಡಿದಿದೆ. ಸದಾ ಲವಲವಿಕೆಯಿಂದ ಎಲ್ಲರನ್ನೂ ನಗಿಸುತ್ತಿದ್ದ ‘ಪಡೀಲ್ದ ಆಶಾಕ್ಕ’ ಇನ್ನು ನೆನಪು ಮಾತ್ರ.

