ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಮುಳ್ಯ ಅಟ್ಲೂರಿನಲ್ಲಿ ಉದ್ಘಾಟನೆಗೊಂಡಿತು.
ಅಜ್ಜಾವರ ಗ್ರಾಮ ಪಂಚಾಯತ್ ಸದಸ್ಯ ವಿಶ್ವನಾಥ ಮುಳ್ಯ ಮಠ ಶಿಬಿರವನ್ನು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಅಣ್ಣಯ್ಯ ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಗ್ರಾಮೀಣ ಜನರ ಜೊತೆ ಬೆರೆತಾಗ ಅವರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕ ಶಿವರಾಮ ಕೇನಾಜೆ, ಮಹಾ ಗಣಪತಿ ಭಜನಾ ಮಂದಿರದ ಅಧ್ಯಕ್ಷ ಪ್ರಕಾಶ ತೋರಣಗಂಡಿ, ಶಾಲಾ ಮುಖ್ಯೋಪಾಧ್ಯಾಯ ರವಿಕುಮಾರ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಿರಣ ಅಟ್ಲುರು, ಶಿಬಿರದ ಸ್ಥಳೀಯ ಸಮಿತಿಯ ಸಂಚಾಲಕ ನಾಗರಾಜ ಮುಳ್ಯ, ಎನ್ಎಸ್ಎಸ್ ಸೇವಾ ಸಂಗಮದ ಸಂಘಟನಾ ಕಾರ್ಯದರ್ಶಿ ಸುಜಿತ್ ಎಂ. ಎಸ್ ಉಪಸ್ಥಿತರಿದ್ದು ಶುಭ ಹಾರೈಸಿದರು.
ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಬಿಳಿನೆಲೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್ಎಸ್ಎಸ್ ಸ್ವಯಂ ಸೇವಕ ಪ್ರಸನ್ನ ವಂದಿಸಿದರು. ಸ್ವಯಂ ಸೇವಕಿ ದೀಕ್ಷಿತ ಕೆ. ಸಿ ಕಾರ್ಯಕ್ರಮ ನಿರೂಪಿಸಿದರು.
ಈ ಶಿಬಿರವು ಎನ್ನೆಸ್ಸೆಸ್ ಹಿರಿಯ ವಿದ್ಯಾರ್ಥಿಗಳ ಸಂಘ” ಎನ್.ಎಸ್.ಎಸ್. ಸೇವಾಸಂಗಮ ಟ್ರಸ್ಟ್(ರಿ) ನ ದಶಮಾನೋತ್ಸವದ ಜೊತೆ ಜಂಟಿಯಾಗಿ ನಡೆಯುತ್ತಿದ್ದು, ಮುಳ್ಯ ಅಟ್ಲೂರು ಶಾಲೆಗೆ ಕೊಡುಗೆ ನೀಡಲ್ಪಡುವ ಕಲಿಕಾ ಬಾಲವನದ ಶ್ರಮದಾನ ನಡೆಯುತ್ತಿದೆ.
ಜನವರಿ 2 ಮತ್ತು 3 ರಂದು ರಾಜ್ಯ ಮಟ್ಟದ ನಾಯಕತ್ವ ಶಿಬಿರ ನಡೆಯಲಿದ್ದು ಜನವರಿ 3 ರಂದು ಸಂಜೆ ದಶಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ವಿವಿಧ ಕೊಡುಗೆಗಳ ಹಸ್ತಾಂತರ ಹಾಗೂ ರಾಜ್ಯ ಮಟ್ಟದ ” ಅತ್ಯುತ್ತಮ ಎನ್ನೆಸ್ಸೆಸ್ ಸ್ವಯಂ ಸೇವಕ/ಸೇವಕಿ” ಪ್ರಶಸ್ತಿ ಪ್ರಧಾನ ನಡೆಯಲಿದೆ.

