ಪುತ್ತೂರು: ಆಳ್ವಾಸ್ ಎಜುಕೇಷನ್ ಫೌಂಡೇಶನ್ ಮತ್ತು ಆಳ್ವಾಸ್ ನುಡಿಸಿರಿ ವಿರಾಸತ್ ಪುತ್ತೂರು ಘಟಕದ ಆಶ್ರಯದಲ್ಲಿ ನವೆಂಬರ್ 16, 2025 (ಭಾನುವಾರ) ರಂದು ಭವ್ಯ ಸಾಂಸ್ಕೃತಿಕ ವೈಭವ ನೆರವೇರಲಿದೆ. 350 ವಿದ್ಯಾರ್ಥಿ ಕಲಾವಿದರ ಅಪಾರ ಪ್ರತಿಭೆಯನ್ನು ಒಳಗೊಂಡ ಮನಮೋಹಕ ಕಲಾಪ್ರದರ್ಶನಗಳು ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿವೆ.

ಯೋಗದಿಂದ ನೃತ್ಯವರೆಗೆ, ಯಕ್ಷಗಾನದಿಂದ ಜನಪದದವರೆಗೆ ದೇಶದ ವೈವಿಧ್ಯಮಯ ಕಲಾರೂಪಗಳು ವೇದಿಕೆಯ ಮೇಲೆ ಜೀವಂತವಾಗಲಿವೆ. ಯೋಗದೀಪಿಕ, ಶಾಸ್ತ್ರೀಯ ನೃತ್ಯ ‘ಅಷ್ಟಲಕ್ಷ್ಮೀ’, ಬಡಗುತಿಟ್ಟು ಯಕ್ಷಗಾನ ‘ಶ್ರೀರಾಮ ಪಟ್ಟಾಭಿಷೇಕ’, ಗುಜರಾತಿ ದಾಂಡಿಯಾ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಮಲ್ಲಕಂಬ ಮತ್ತು ರೋಪ್ ಕಸರತ್ತು, ಸೃಜನಾತ್ಮಕ ನೃತ್ಯ, ಡೊಳ್ಳು ಕುಣಿತ, ಕಥಕ್ ‘ವರ್ಷಧಾರೆ’, ಪುರುಲಿಯಾ, ತೆಂಕುತಿಟ್ಟು ಯಕ್ಷಗಾನ ‘ಅಗ್ರಪೂಜೆ’, ಬೊಂಬೆ ವಿನೋದಾವಳಿ ಸೇರಿದಂತೆ ಅನೇಕ ಕಲಾರೂಪಗಳು ಸಾಂಸ್ಕೃತಿಕ ರಸದೌತಣ ನೀಡಲಿವೆ.
ಕಾರ್ಯಕ್ರಮವು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದೇವರಮಾರು ಗದ್ದೆ, ಸಿ.ಎಚ್. ಕೋಚಣ್ಣರೈ ಸಭಾಂಗಣ – ಜಿ.ಎಲ್. ಆಚಾರ್ಯ ವೇದಿಕೆಯಲ್ಲಿ ನೆರವೇರಲಿದೆ. ಕಾರ್ಯಕ್ರಮವು ಸಂಜೆ 6:30ಕ್ಕೆ ಪ್ರಾರಂಭವಾಗಲಿದ್ದು, ಸಭಾ ಕಾರ್ಯಕ್ರಮ ಸಂಜೆ 5:45ರಿಂದ ಆರಂಭವಾಗುತ್ತದೆ (ಒಟ್ಟು 45 ನಿಮಿಷ). ಕಾರ್ಯಕ್ರಮಕ್ಕೆ ಡಾ| ಎಂ. ಮೋಹನ ಆಳ್ವ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

