ವರ್ಷಿಣಿ ಯೋಗ ಶಿಕ್ಷಣ, ಸಾಂಸ್ಕೃತಿಕ ಮತ್ತು ಕ್ರೀಡಾ ಟ್ರಸ್ಟ್ (ರಿ) ಕಲಾ ಯೋಗಾಸನ ಸ್ಪೋರ್ಟ್ಸ್ ಮತ್ತು ಸಾಂಸ್ಕೃತಿಕ ಅಕಾಡೆಮಿ, ತುಮಕೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತುಮಕೂರು ಇದರ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ೦೮ ನೇ ವರ್ಷದ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯು ಮಹಾತ್ಮ ಗಾಂಧಿ ಒಳಾಂಗಣ ಕ್ರೀಡಾಂಗಣ ತುಮಕೂರಿನಲ್ಲಿ ನವಂಬರ್ ೦೨ ೨೦೨೫ ಆದಿತ್ಯವಾರದಂದು ನಡೆಯಿತು.


ಈ ಸ್ಪರ್ಧೆಯಲ್ಲಿ ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಸುಳ್ಯದ ವಿದ್ಯಾರ್ಥಿನಿ ಕು.ಕ್ಷಮಾ ಅವರು ಭಾಗವಹಿಸಿ ಸಾಂಪ್ರದಾಯಕ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಕಾಲಿನ ಮೇಲೆ ನಿಂತು ಮಾಡುವ ಆಸನದಲ್ಲಿ (LEG BALANCE)ತೃತೀಯ ಸ್ಥಾನವನ್ನು ಪಡೆದು ಮಾಲ್ಡೀವ್ಸ್ ನಲ್ಲಿ ನಡೆಯವ ಅಂತಾರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.


