ಮುಂಬೈ: ಪ್ರಸಿದ್ಧ ಗಾಯಕಿ ಆಶಾ ಭೋಸ್ಲೆ ಅವರ ಧ್ವನಿ ಹಾಗೂ ಚಿತ್ರವನ್ನು ಕೃತಕ ಬುದ್ಧಿಮತ್ತೆ (AI) ಬಳಸಿ ದುರುಪಯೋಗ ಮಾಡಬಾರದೆಂದು ಬಾಂಬೆ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.

ಕೋರ್ಟ್ ನೀಡಿದ ಅಡ್ಇಂಟರಿಂ ರಕ್ಷಣೆಯಡಿ, ಯಾವುದೇ AI ಪ್ಲಾಟ್‌ಫಾರ್ಮ್‌ಗಳು, ಆನ್‌ಲೈನ್ ಮಾರ್ಕೆಟ್‌ಪ್ಲೇಸ್‌ಗಳು ಹಾಗೂ ಮಾರಾಟಗಾರರು ಅವರ ಧ್ವನಿಯನ್ನು ಕ್ಲೋನ್ ಮಾಡುವುದು, ಚಿತ್ರ ಅಥವಾ ಹೋಲಿಕೆಯ ಮೂಲಕ ವ್ಯಾಪಾರಿಕವಾಗಿ ದುರುಪಯೋಗಪಡಿಸಿಕೊಳ್ಳುವದು ನಿಷೇಧಿಸಲಾಗಿದೆ.
ಆಶಾ ಭೋಸ್ಲೆ ಪರವಾಗಿ ವಕೀಲರು ಹಾಜರಾಗಿ, ಅನುಮತಿಯಿಲ್ಲದೇ ಅವರ ಧ್ವನಿ ಹಾಗೂ ರೂಪವನ್ನು ಬಳಸಿ ನಕಲಿ ಕಂಟೆಂಟ್ ತಯಾರಿಸಲಾಗುತ್ತಿದೆ ಎಂಬ ಗಂಭೀರ ಆಕ್ಷೇಪವನ್ನು ಮಂಡಿಸಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ತಕ್ಷಣದ ಕ್ರಮವಾಗಿ ರಕ್ಷಣಾ ಆದೇಶ ನೀಡಿದೆ.
ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಕಲಾವಿದರ ಹಕ್ಕುಗಳನ್ನು ಕಾಪಾಡುವ ದಿಕ್ಕಿನಲ್ಲಿ ಈ ತೀರ್ಪು ಮಹತ್ವದ ಹೆಜ್ಜೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

