ಒಂದೆಡೆ ಕಾಂತಾರ ಚಾಪ್ಟರ್ 1 ಅದ್ಭುತ ಮೇಕಿಂಗ್ ಇಂದ ಅದ್ಧೂರಿ ಆಗಿ ಮೂಡಿಬಂದರೆ, ಇನ್ನೊಂದೆಡೆ ಪಬ್ಲಿಸಿಟಿಗೋಸ್ಕರ ಅದರಲ್ಲಿನ ದೃಶ್ಯದ ಅನುಕರಣೆ ಕೂಡ ನಡೆಯುತ್ತಿದೆ.

ಇಲ್ಲೊಬ್ಬ ವ್ಯಕ್ತಿ ಸಿನಿಮಾ ನೋಡಿ ಹೊರಗೆ ಬಂದು ಮೈ ಮೇಲೆ ದೈವ ಬಂದಂತೆ ಹುಚ್ಚನಾಗಿ ಕಿರುಚುತ್ತಾ ಇದ್ದ ಘಟನೆ ನಡೆದಿದೆ.
ತುಳುನಾಡಿಗೆ ತನ್ನದೇ ಆದ ಸಂಸ್ಕೃತಿ, ಇತಿಹಾಸವಿದೆ. ಇಲ್ಲಿನ ದೈವಗಳು ಹೀಗೆ ಸಿಕ್ಕ ಸಿಕ್ಕವರಿಗೆ ಮೈ ಮೇಲೆ ಬಂದ ಇತಿಹಾಸವಿಲ್ಲ, ಬರುವುದು ಕೂಡ ಇಲ್ಲ. ಇದೆಲ್ಲ ಪಬ್ಲಿಸಿಟಿಗೆ ಮಾಡುವ ಡ್ರಾಮಾ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಯಾವ ಯಾವ ಅವತಾರ ನೋಡಬೇಕಾಗಬಹುದು ಎಂದು ತುಳುನಾಡಿನ ಜನ ಆತಂಕದಿಂದ ಮಾತನಾಡಿಕೊಳ್ಳುತ್ತಿದ್ದಾರೆ.

