ಜಿಎಸ್‌ಟಿ ಸುಧಾರಣೆ: ಬೆಂಕಿಪೆಟ್ಟಿಗೆ ಮತ್ತು ಪಟಾಕಿ ತಯಾರಕರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ

ಜಿಎಸ್‌ಟಿ ಸುಧಾರಣೆ: ಬೆಂಕಿಪೆಟ್ಟಿಗೆ ಮತ್ತು ಪಟಾಕಿ ತಯಾರಕರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ

ತೂತುಕೋಡಿ ಜಿಲ್ಲೆಯ ಕೋವಿಲ್ಪಟ್ಟಿಯಲ್ಲಿ ನಡೆದ ಬೆಂಕಿಪೆಟ್ಟಿಗೆ ಮತ್ತು ಪಟಾಕಿ ತಯಾರಕರ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾತನಾಡಿದರು.

ಅವರು ದೇಶದ ನಾಗರಿಕರ ಹಿತದೃಷ್ಟಿಯಿಂದ ಜಿಎಸ್‌ಟಿ ಸ್ಲ್ಯಾಬ್‌ಗಳಲ್ಲಿ ಸುಧಾರಣೆ ಮಾಡಲಾಗಿದೆ ಎಂದು ತಿಳಿಸಿದರು. ಬೆಂಕಿಪೆಟ್ಟಿಗೆ ಮತ್ತು ಪಟಾಕಿ ತಯಾರಕರಿಗೆ ಸರ್ಕಾರದಿಂದ ಎಲ್ಲ ರೀತಿಯ ನೆರವು ಲಭ್ಯವಾಗಲಿದೆ ಎಂದರು.

ಅಲ್ಲದೆ, 375 ವಸ್ತುಗಳ ಜಿಎಸ್‌ಟಿ ದರ ಕಡಿತ ಮಾಡಿರುವುದರಿಂದ ಜನರು ಹಬ್ಬ-ಹರಿದಿನಗಳನ್ನು ಇನ್ನಷ್ಟು ಸಂಭ್ರಮದಿಂದ ಆಚರಿಸಲು ಇದು ಸಹಾಯಕವಾಗುತ್ತದೆ ಎಂದರು.

ರಾಷ್ಟ್ರೀಯ