2025ರ ಸೆಪ್ಟೆಂಬರ್ 7ರಂದು ಚಂದ್ರಗ್ರಹಣ ಸಂಭವಿಸುತ್ತಿದ್ದು, ರಾತ್ರಿ 9.50ಕ್ಕೆ ಆರಂಭವಾಗಿ ಬೆಳಗಿನ 1.25ಕ್ಕೆ ಮೋಕ್ಷವಾಗಲಿದೆ. ಈ ಗ್ರಹಣವು ಕುಂಭ, ಮೀನ, ಕರ್ಕಾಟಕ ಹಾಗೂ ವೃಶ್ಚಿಕ ರಾಶಿಯವರಿಗೆ ದೋಷಕಾರಿಯಾಗಿದ್ದು, ಕನ್ಯಾ ರಾಶಿಯವರಿಗೆ ಮಾತ್ರ ಶುಭಫಲಗಳನ್ನು ನೀಡುತ್ತದೆ ಎಂದು ಧರ್ಮಸಿಂಧು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.

ಗ್ರಹಣದೋಷ ಹೊಂದಿರುವವರು ಶಾಂತಿ ಕಾರ್ಯಗಳನ್ನು ಮಾಡುವುದು ಉತ್ತಮ. ಬದಲಾಗಿ ಗ್ರಹಣದ ಅವಧಿಯಲ್ಲಿ “ಹ್ರಾಂ ರಾಹವೇ ನಮಃ” ಮತ್ತು “ಮಂ ಸೋಮಾಯ ನಮಃ” ಮಂತ್ರಗಳನ್ನು ಜಪಿಸುವುದರಿಂದ ಲಾಭವಿದೆ.
ಗ್ರಹಣದ ನಿಯಮಗಳ ಪ್ರಕಾರ, ಸೆಪ್ಟೆಂಬರ್ 7ರಂದು ಮಧ್ಯಾಹ್ನ 2 ಗಂಟೆಯ ನಂತರ (ಅಶಕ್ತರು ಸಂಜೆ 4.30 ನಂತರ) ಉಪವಾಸ ಪ್ರಾರಂಭಿಸಬೇಕು. ಗ್ರಹಣದ ಮೊದಲು ಹಾಗೂ ನಂತರ ಸ್ನಾನ ಮಾಡುವುದು ಅಗತ್ಯ. ಗ್ರಹಣ ನಡೆಯುವ ವೇಳೆ ನಿದ್ರೆಗೆ ಜಾರದೆ, ಆಹಾರ, ಪಾನೀಯಗಳನ್ನು ತ್ಯಜಿಸಿ, ಮಂತ್ರಜಪದಲ್ಲಿ ತೊಡಗಿಸಿಕೊಳ್ಳಬೇಕು.
ಮಾಹಿತಿ: ಅರವಿಂದ ಬನ್ನಿಂತಾಯ
ಪುರೋಹಿತರು ಹಾಗೂ ಜ್ಯೋತಿಷಿಗಳು
ಕಾವೂರು +91 98212 50166

