ಬೆಂಗಳೂರು: “ದಿ ಆರ್ಟ್ ಆಫ್ ಲಿವಿಂಗ್” ಸಂಸ್ಥೆಯು 14 ದಿನಗಳ ಉಚಿತ ಆನ್‌ಲೈನ್ ಯೋಗ ತರಬೇತಿಯನ್ನು ನಡೆಸಲಾಗುತ್ತಿದೆ. ಈ ವಿಶೇಷ ಕಾರ್ಯಕ್ರಮವು ಸೆಪ್ಟೆಂಬರ್ 8ರಿಂದ ಆರಂಭವಾಗುತ್ತಿದ್ದು, ಅಂತಾರಾಷ್ಟ್ರೀಯ ಪ್ರಮಾಣಿತ ಯೋಗ ಶಿಕ್ಷಕರಿಂದ ಮಾರ್ಗದರ್ಶನ ಲಭಿಸಲಿದೆ.

ಕಾರ್ಯಕ್ರಮದ ಭಾಗವಾಗಿ ಮಾರ್ಗದರ್ಶಿತ ವ್ಯಾಯಾಮ, ಉಸಿರಾಟ ತಂತ್ರಗಳು ಮತ್ತು ಧ್ಯಾನದ ಮೂಲಕ ಬೆಳಿಗ್ಗೆ ಹಾಗೂ ಸಂಜೆ ಸಮಯಗಳನ್ನು ಶಾಂತಿಯುತವಾಗಿ ಪ್ರಾರಂಭಿಸಲು ಮತ್ತು ಮುಗಿಸಲು ಅವಕಾಶ ಕಲ್ಪಿಸಲಾಗಿದೆ.
🕕 ಸಮಯ:
- ಬೆಳಿಗ್ಗೆ: 6 AM | 7 AM | 8 AM | 11 AM
- ಸಂಜೆ: 5 PM | 6 PM | 7 PM
✨ ಎಲ್ಲಾ ಹಂತದ ಅಭ್ಯಾಸಕರಿಗೂ ಈ ಕಾರ್ಯಕ್ರಮ ಮುಕ್ತವಾಗಿದ್ದು, ಸಂಪೂರ್ಣ ಉಚಿತವಾಗಿ ಲಭ್ಯವಿರಲಿದೆ.
💻 ಆಸಕ್ತರು ತಕ್ಷಣವೇ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು.

