ದಸರಾ ಉದ್ಘಾಟನೆ ವಿವಾದ ಬಾನು ಮುಸ್ತಾಕ್ ಆಯ್ಕೆ ಗೆ ಯದುವೀರ್ ಒಡೆಯರ್ ಸಹಮತ.

ದಸರಾ ಉದ್ಘಾಟನೆ ವಿವಾದ ಬಾನು ಮುಸ್ತಾಕ್ ಆಯ್ಕೆ ಗೆ ಯದುವೀರ್ ಒಡೆಯರ್ ಸಹಮತ.

ಈ ಬಾರಿಯ ದಸರಾ ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಸ್ತಾಕ್ ಅವರಿಂದ ಮಾಡಿಸಲು ಸರ್ಕಾರ ತಯಾರಿ ನಡೆಸಿದೆ ಈ ನಡುವೆ ಹಿಂದೂ ಭಾವನೆಗೆ ಗೌರವ ಕೊಡದ ದೇವಿ ಚಾಮುಂಡೇಶ್ವರಿಯಲ್ಲಿ ನಂಬಿಕೆ ಇಲ್ಲದ ವ್ಯಕ್ತಿ ಉದ್ಘಾಟನೆ ಮಾಡಬಾರದು ಎಂದು ಪ್ರತಾಪ್ ಸಿಂಹ ಸೇರಿದಂತೆ ಹಲವರು ವಿರೋಧಿಸುತ್ತಿದ್ತಾರೆ.

ಈ ಸಂದರ್ಭದಲ್ಲಿ ಮೈಸೂರು ರಾಜ ಮನೆತನದ ಯದುವೀರ್ ಒಡೆಯರ್ ಇಂದು ಈ ಕುರಿತು ಪ್ರತಿಕ್ರಿಯೆ ನೀಡಿದ್ದು ಸಾಹಿತ್ಯ ಜಗತ್ತಿಗೆ ಬಾನು ಮುಸ್ತಾಕ್ ಕೊಡುಗೆ ಅಪಾರ ಮತ್ತು ಸಾಮಾಜಿಕ ಹೋರಾಟದಲ್ಲಿ ಕೂಡ ಅವರ ಕೊಡುಗೆ ಇದೆ. ದಸರಾಕ್ಕೆ ತನ್ನದೇ ಆದ ಪಾರಂಪರಿಕ ಇತಿಹಾಸವಿದೆ ಧಾರ್ಮಿಕ ನಂಬಿಕೆ ಇದೆ ಒಂದು ವೇಳೆ ಬಾನು ಮುಸ್ತಾಕ್ ಅವರಿಗೆ ತಾಯಿ ಚಾಮುಂಡೇಶ್ವರಿ ಮೇಲೆ ನಂಬಿಕೆ ಇದ್ದು ಈ ಎಲ್ಲಾ ಭಾವನೆಗಳನ್ನು ಗೌರವಿಸುತ್ತಿದ್ದರೆ ಅವರು ಉದ್ಘಾಟನೆ ಮಾಡಬಹುದು ನಮ್ಮ ವಿರೋಧವಿಲ್ಲ ಎಂಬ ಹೇಳಿಕೆ ನೀಡಿದ್ದಾರೆ.

ಧಾರ್ಮಿಕ ರಾಜ್ಯ