ಮಂಗಳೂರು, ಜುಲೈ 30, 2025 – ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಪರಾಧ ಕ್ರಮಾಂಕ 39/2025, ಕಲಂ 311(ಎ) BNS ಪ್ರಕರಣದ ಪರಿಶೀಲನೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡ (SIT) ಈಗ ಸಾರ್ವಜನಿಕರಿಗೆ ಮಾಹಿತಿ ನೀಡಲು ಹಾಗೂ ಪಡೆಯಲು ಸಹಾಯವಾಣಿಯನ್ನು ಆರಂಭಿಸಿದೆ.

ಈ ಸಹಾಯವಾಣಿಯ ಮೂಲಕ ಸಾರ್ವಜನಿಕರು ತಮ್ಮ ಬಳಿ ಇರುವ ಯಾವುದೇ ಸಂಬಂಧಿತ ಮಾಹಿತಿಯನ್ನು SIT ತಂಡಕ್ಕೆ ನೀಡಬಹುದು. ತನಿಖೆ ಪ್ರಗತಿಗೊಳ್ಳಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
📍 SIT ಕಚೇರಿ ವಿಳಾಸ:
ನಿರೀಕ್ಷಣಾ ಮಂದಿರ,
ಮಲಿ ಕಟ್ಟೆ, ಕದ್ರಿ,
ಮಂಗಳೂರು ನಗರ, ದಕ್ಷಿಣ ಕನ್ನಡ ಜಿಲ್ಲೆ.
ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 5:00 ರವರೆಗೆ
📞 ಸಂಪರ್ಕ ವಿವರಗಳು:
- ಬೋರ್ಡ್ ದೂರವಾಣಿ: 0824-2005301
- ವಾಟ್ಸಪ್ ಸಂಖ್ಯೆ: 8277986369
- ಇಮೇಲ್: sitdps@ksp.gov.in
SIT ತಂಡವು ಮಂಗಳೂರು ನಗರದಲ್ಲಿ ತಮ್ಮ ಕಚೇರಿಯನ್ನು ಸ್ಥಾಪಿಸಿದ್ದು, ನ್ಯಾಯ ಮತ್ತು ಸತ್ಯವನ್ನು ಹೊರತರುವ ನಿಟ್ಟಿನಲ್ಲಿ ಈ ಸಹಾಯವಾಣಿ ಸೇವೆಯನ್ನು ಆರಂಭಿಸಿದ್ದು, ಸಾರ್ವಜನಿಕರಿಂದ ಸಂಪೂರ್ಣ ಸಹಕಾರ ನಿರೀಕ್ಷಿಸಿದೆ.