ಆನೆಗುಂಡಿಯಲ್ಲಿ ಗಾಳಿ ಮಳೆಗೆ ಬಿದ್ದ ಮರ: ಕರೆಂಟ್ ಇಲ್ಲದೆ ಸುಳ್ಯ ಕತ್ತಲೆಯಲ್ಲಿ

ಆನೆಗುಂಡಿಯಲ್ಲಿ ಗಾಳಿ ಮಳೆಗೆ ಬಿದ್ದ ಮರ: ಕರೆಂಟ್ ಇಲ್ಲದೆ ಸುಳ್ಯ ಕತ್ತಲೆಯಲ್ಲಿ

ಸುಳ್ಯದಲ್ಲಿ ಮಳೆ ಹನಿ ಬಿದ್ದರೆ ಸಾಕು, ಕರೆಂಟ್ ಕಟ್ ಆಗುವುದು ಸಾಮಾನ್ಯ . ಆನೆಗುಂಡಿಯಲ್ಲಿ ಮರ ಬಿದ್ದು ವಿದ್ಯುತ್ ಕಂಬಗಳು ಮುರಿದುಬಿದ್ದ ಹಿನ್ನೆಲೆಯಲ್ಲಿ ಸಂಜೆಯಿಂದ ಸುಳ್ಯಕ್ಕೆ ಸಂಪೂರ್ಣ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ.

ವಿದ್ಯುತ್ ಇಲಾಖೆಯ ಮೂಲಗಳ ಪ್ರಕಾರ, ಮರ ತೆರವು ಹಾಗೂ ತಂತಿ ದುರಸ್ತಿ ಕಾರ್ಯ ಮುಂದುವರೆದಿದ್ದು, ಅಂದಾಜು 12 ಗಂಟೆಗಳ ನಂತರ ವಿದ್ಯುತ್ ಸರಬರಾಜು ಪುನಃ ಸ್ಥಾಪನೆಯಾಗುವ ಸಾಧ್ಯತೆ ಇದೆ. ಸದ್ಯಕ್ಕೆ ಜನಜೀವನ ಕತ್ತಲಿನಲ್ಲಿ ಸಾಗುತ್ತಿದೆ

ರಾಜ್ಯ