ಭಾರತದ ಪ್ರಧಾನಿಯಾಗಿ ನಿರಂತರವಾಗಿ ಎರಡು ಅವಧಿಗಳನ್ನು ಪೂರೈಸಿರುವ ನರೇಂದ್ರ ಮೋದಿ, ಶುಕ್ರವಾರ (ಜುಲೈ 26, 2025) ರಂದು ಇಂದಿರಾ ಗಾಂಧಿಯವರ 4,077 ದಿನಗಳ ದಾಖಲೆಯನ್ನು ಮುರಿದು, ದೇಶದ ಇತಿಹಾಸದಲ್ಲಿ ಅತ್ಯಂತ ಸುದೀರ್ಘ ಅವಧಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ ಎರಡನೇ ವ್ಯಕ್ತಿ ಎಂಬ ಗೌರವಕ್ಕೆ ಪಾತ್ರರಾಗಲಿದ್ದಾರೆ.

ನರೇಂದ್ರ ಮೋದಿಯವರು 2001ರಲ್ಲಿ ಗುಜರಾತ್ ಮುಖ್ಯಮಂತ್ರಿ ಆಗಿ ಅಧಿಕಾರಕ್ಕೆ ಬಂದಿದ್ದರು. 2014ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಅವರು, ಸ್ವಾತಂತ್ರ್ಯ ನಂತರ ಜನಿಸಿದ ಮೊದಲ ಪ್ರಧಾನಿಯಾಗಿರುವುದರ ಜೊತೆಗೆ, ಕಾಂಗ್ರೆಸ್ ಪಕ್ಷಕ್ಕೆ ಸೇರದ ಅತ್ಯಂತ ದೀರ್ಘಾವಧಿಯ ಪ್ರಧಾನಿಯೂ ಆಗಿದ್ದಾರೆ.