ಧರ್ಮಸ್ಥಳ ಕೇಸ್ ಗೆ ಎಸ್ ಐ ಟಿ ರಚನೆ ಕುರಿತು ಮಾಜಿ ಸಚಿವ ಶ್ರೀರಾಮುಲು ಬೇಜವಾಬ್ದಾರಿ ಹೇಳಿಕೆ

ಧರ್ಮಸ್ಥಳ ಕೇಸ್ ಗೆ ಎಸ್ ಐ ಟಿ ರಚನೆ ಕುರಿತು ಮಾಜಿ ಸಚಿವ ಶ್ರೀರಾಮುಲು ಬೇಜವಾಬ್ದಾರಿ ಹೇಳಿಕೆ

ನೂರಾರು ಅತ್ಯಾಚಾರ, ಕೊಲೆಗಳ ಶವವನ್ನು ಹೂತಿಟ್ಟಿದ್ದ ಬಗ್ಗೆ ವ್ಯಕ್ತಿಯೊಬ್ಬ ದೂರು ದಾಖಲಿಸುವ ಮೂಲಕ ಸಂಚಲನ ಸೃಷ್ಟಿಸಿದ್ದ ಕೇಸ್ ನ ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂದು ಜನರ ಆಕ್ರೋಶ ಮತ್ತು ಹಿರಿಯ ವಕೀಲರ ನಿಯೋಗದ ಮನವಿಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿ ಆದೇಶ ಹೊರಡಿಸಿದೆ.

ಆದರೆ ಈ ಕುರಿತು ರಾಜ್ಯ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಶ್ರೀರಾಮುಲು ಬೇಜವಾಬ್ದಾರಿ ಹೇಳಿಕೆ ನೀಡಿದ್ದು ಆಶ್ಚರ್ಯಕ್ಕೆ ಕಾರಣವಾಗಿದೆ. ಶ್ರೀರಾಮುಲು ಎಸ್ ಐ ಟಿ ರಚನೆ ಹಿಂದೂ ಧರ್ಮದ ಮೇಲೆ ಗದಾಪ್ರಹಾರ ಎಂದು ಹೇಳುವ ಮೂಲಕ ಬಾಲಿಶ ಹೇಳಿಕೆ ನೀಡಿದ್ದಾರೆ.

ಧರ್ಮಸ್ಥಳ ಜೈನ ಧರ್ಮದ ಆಡಳಿತವಿರುವ ದೇವಾಲಯ ಮತ್ತು ಅಲ್ಲಿ ನಡೆದಿರುವ ಹತ್ಯೆಗಳು ಹಿಂದೂ ಯುವತಿಯರದ್ದು ಹೀಗಿರುವಾಗ ಹಿಂದೂ ಧರ್ಮದ ಮೇಲೆ ಹೇಗೆ ಗದಾಪ್ರಹಾರ ವಾಗುತ್ತದೆ ಎಂದು ನೆಟ್ಟಿಗರು ಅಪಹಾಸ್ಯ ಮಾಡುತ್ತಿದ್ದಾರೆ. ಇನ್ನಾದರೂ ಜನ ಪ್ರತಿನಿಧಿಗಳು ಘಟನೆಯ ಗಂಭೀರತೆ ಅರಿತು ಜವಾಬ್ದಾರಿ ವಹಿಸಿ ಮಾತನಾಡಿ ತಮ್ಮ ಗೌರವ ಉಳಿಸುವುದು ಒಳ್ಳೆಯದು ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಪರಾಧ ರಾಜ್ಯ ರಾಷ್ಟ್ರೀಯ