ರಾಜ್ಯ ಸರ್ಕಾರ ಎಸ್ ಐ ಟಿ ರಚಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಇಬ್ಬರು ಅಧಿಕಾರಿಗಳು ಈ ತನಿಖೆಯಿಂದ ಹಿಂದೆ ಸರಿಯಲಿದ್ದಾರೆ ಎನ್ನುವ ಸುದ್ದಿಗಳು ಕೇಳಿಬರುತ್ತಿದೆ ಎಂ ಎನ್ ಅನುಚೇತ್ ಐಪಿಎಸ್ ಮತ್ತು ಶ್ರೀಮತಿ ಸೌಮ್ಯಲತಾ ಐಪಿಎಸ್ ಅವರು ಈ ತನಿಖೆಯಿಂದ ಹಿಂದೆ ಸರಿಯಲಿದ್ದಾರೆ ಮತ್ತು ಈ ಕುರಿತು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಿದ್ದಾರೆ ಎನ್ನುವ ಸುದ್ದಿಗಳು ಕೇಳಿಬರುತ್ತಿದೆ.

ಅನುಚೇತ್ ಅವರು ಈ ಹಿಂದೆ ಸೌಜನ್ಯ ಪ್ರಕರಣದ ತನಿಖೆಯಲ್ಲಿ ಇದ್ದು ಇನ್ನೇನು ಆರೋಪಿಗಳನ್ನು ಬಂಧಿಸುವ ಹೆಜ್ಜೆ ಇಡುವ ಹೊತ್ತಿಗೆ ಅವರನ್ನು ವರ್ಗಾವಣೆ ಮಾಡಲಾಗಿತ್ತು ಎನ್ನುವ ಸುದ್ದಿಗಳು ಕೂಡ ಕೇಳಿಬಂದಿದ್ದು ಅವರಿಗೆ ಈ ಎಲ್ಲಾ ಪ್ರಕರಣದ ನೈಜ ಆರೋಪಿಗಳ ಬಗ್ಗೆ ಅರಿವು ಇದ್ದ ಕಾರಣ ಆರೋಪಿಗಳು ರಾಜಕೀಯವಾಗಿ ಬಲಾಢ್ಯರಾಗಿ ಇರುವ ಕಾರಣ ತನಿಖೆಯಿಂದ ಹಿಂದೆ ಸರಿಯುವ ಬಗ್ಗೆ ತೀರ್ಮಾನ ಮಾಡಿದ್ದಾರೆಯೇ ಎಂಬ ಸಂಶಯ ಜನರು ವ್ಯಕ್ತ ಪಡಿಸಿದ್ದಾರೆ.

