ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿರುವ ನಿಗೂಢ ಹಾಗೂ ದಾರುಣ ಹೆಣ್ಣುಮಕ್ಕಳ ಸಾವಿಗೆ ನ್ಯಾಯ ಒದಗಿಸಲು ಆಗ್ರಹಿಸಿ, “#ದೌರ್ಜನ್ಯದವಿರುದ್ಧಸೌಜನ್ಯ” ಹೆಸರಿನಲ್ಲಿ ಒಂದು ಮಹತ್ವದ ಸಮಾನಮನಸ್ಕರ ಸಭೆಯನ್ನು ಏರ್ಪಡಿಸಲಾಗಿದೆ.

ಈ ಸಭೆ ಜುಲೈ 21, 2025 ರಂದು ಮಧ್ಯಾಹ್ನ 4 ಗಂಟೆಗೆ ಬೆಂಗಳೂರಿನ ಕೆ.ಆರ್ ಸರ್ಕಲ್‌ನ ಅಲುಮ್ಮಿ ಅಸೋಸಿಯೇಷನ್ ಯುಪಿಸಿಎಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ನಟ ಮತ್ತು ಸಾಮಾಜಿಕ ಹೋರಾಟಗಾರರಾದ ಚೇತನ್ ಅಹಿಂಸಾ ಭಾಗವಹಿಸಲಿದ್ದು, ನ್ಯಾಯಕ್ಕಾಗಿ ಧ್ವನಿಯಾಗಲು ಕರೆನೀಡಿದ್ದಾರೆ.