ಸ್ವರ್ಣ ಮಹಿಳಾ ಮಂಡಲ (ರಿ) ಕನಕ ಮಜಲು ಮತ್ತು ಶ್ರೀಹರಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ (ರಿ.) ಕನಕಮಜಲು ಇವರ ಜಂಟಿ ಆಶ್ರಯದಲ್ಲಿ ಕೃಷಿ ಮಾಹಿತಿ ಕಾರ್ಯಾಗಾರ ಮತ್ತು ಆರೋಗ್ಯ ಮಾಹಿತಿ ಕಾರ್ಯಕ್ರಮವು ಕನಕ ಮಜಲಿನ ಶ್ರೀ ಆತ್ಮರಾಮ ಭಜನಾಮಂದಿರದ ಸಭಾಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಶ್ರೀಮತಿ ವಾರಿಜ ದಾಮೋದರ ಕೊಡ್ತೀಲು ವಹಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶಾರದಾ ಉಗ್ಗ ಮೂಲೆ ಇವರು ನೆರವೇರಿಸಿದರು. ಕುಮಾರಿ ಪುಷ್ಪಾ ಹಿರಿಯ ಅರೋಗ್ಯ ಸಹಾಯಕಿ ಕನಕಮಲು ಇವರು ಅರೋಗ್ಯ ಮಾಹಿತಿ ನೆರವೇರಿಸಿದರು.


ತಾಳೆ ಕೃಷಿಯ ಬಗ್ಗೆ ಶ್ರೀಯುತ ಕೃಷ್ಣ.ವೈ.ಟಿ, ಏರಿಯಾ ಮ್ಯಾನೇಜರ್, ಉಡುಪಿ ಹಾಗೂ ದಕ್ಷಣ ಕನ್ನಡ ಜಿಲ್ಲೆ, IF ಆಯಿಲ್ ಫಾರ್ಮ್ ಪ್ರೈವೇಟ್
ಲಿಮಿಟೆಡ್ ಮತ್ತು ಶ್ರೀಮತಿ ಕಡ್ಲೆ ರ ತುಳಸಿ ಮೋಹನ್ (ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನಿರ್ದೇಶಕರು ಕೊಡಗು ಜಿಲ್ಲಾ ಕಾಫಿ ಬೆಳೆಗಾರರ ಸಹಕಾರಿ ಸಂಘ) ಕಾಫಿ ಬೆಳೆಯ ಬಗ್ಗೆ ಮಾಹಿತಿ ನೀಡಿದರು. ಹಾಗೂ ಶ್ರೀ ವಿನೋದ್ ಮೂಡಗದ್ದೆ, ಸದಸ್ಯರು, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಪತ್ರಕರ್ತರು ಹಾಗೂ ಕಾಫಿ ಬೆಳೆಗಾರರು, ಇವರು ಕಾಫಿ ಬೆಳೆಯ ಅನುಭವವನ್ನು ಹಂಚಿಕೊಂಡರು. ಶ್ರೀಮತಿ ಶ್ವೇತಾ, ವ್ಯವಸ್ಥಾಪಕರು, ಸಂಜೀವಿನಿ ಒಕ್ಕೂಟ (ರಿ)ಸುಳ್ಯ,ಇವರು ಸಂಜೀನಿ ಸಂಘದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಸುಳ್ಯ ತಾಲೂಕು IFಆಯಿಲ್ ಫಾರ್ಮ್ ಪ್ರೈ. ಲಿಮಿಟೆಡ್ ನ ಕ್ಲಸ್ಟರ್ ಆಫೀಸರ್ ಶ್ರೀ ರವಿಶಂಕರ್, ಸಂಜೀವಿನಿ ಒಕ್ಕೂಟದ ಗ್ರಾಮ ಪಂಚಾಯತ್ ಮಟ್ಟದ ಅಧ್ಯಕ್ಷರಾದ ಶ್ರೀಮತಿ ವಿಜಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ರೇಖಾ ಅಡ್ಯಾರ್ ಪ್ರಾರ್ಥಿಸಿದರು, ಶ್ರೀಮತಿ ಪ್ರೇಮ ಅಡ್ಯಾರ್ ಇವರು ಸ್ವಾಗತಿಸಿ, ಶ್ರೀಮತಿ ಶ್ಯಾಮಲಾ ಪೆರುಂಬಾರು ಇವರು ವಂದಿಸಿದರು, ಶ್ರೀಮತಿ ಸುಮತಿ ಕುತ್ಯಾಲ ಕಾರ್ಯಕ್ರಮ ನಿರೂಪಿಸಿದರು.