ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದಲ್ಲಿ ಯಾವುದೇ ತಾಂತ್ರಿಕ ದೋಷಗಳಿಲ್ಲವೆಂದು ಏರ್ ಇಂಡಿಯಾ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ತಿಳಿಸಿದ್ದಾರೆ. ತಮ್ಮ ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ, ನಿಯಮಿತವಾಗಿ ವಿಮಾನ ತಪಾಸಣೆಗಳು ನಡೆದಿದ್ದವು ಹಾಗೂ ಕೊನೆಯ ತಪಾಸಣೆ 2023ರ ಜೂನ್‌ನಲ್ಲಿ ನಡೆದಿದ್ದು, ಮುಂದಿನ ತಪಾಸಣೆ ಡಿಸೆಂಬರ್‌ನಲ್ಲಿ ನಡೆಯಬೇಕಿತ್ತು ಎಂದು ಸ್ಪಷ್ಟಪಡಿಸಿದರು.


ವಿಮಾನದ ಬಲಭಾಗದ ಎಂಜಿನ್ ಮಾರ್ಚ್‌ನಲ್ಲಿ ಹಾಗೂ ಎಡಭಾಗದ ಎಂಜಿನ್ ಏಪ್ರಿಲ್‌ನಲ್ಲಿ ಪರಿಶೀಲನೆಗೊಳಪಟ್ಟಿದ್ದು, ಲಂಡನ್‌ಗೆ ಹಾರಾಟ ನಡೆಸುವವರೆಗೂ ವಿಮಾನದಲ್ಲಿ ಯಾವುದೇ ದೋಷ ಕಂಡುಬಂದಿರಲಿಲ್ಲ ಎಂದು ವಿಲ್ಸನ್ ತಿಳಿಸಿದ್ದಾರೆ.
ಅಪಘಾತ ಸಂಭವಿಸಿ ಒಂದು ವಾರ ಕಳೆದ ನಂತರವೂ ಬ್ಲ್ಯಾಕ್ ಬಾಕ್ಸ್ ಹಾನಿಯ ಬಗ್ಗೆ ಊಹಾಪೋಹಗಳು ಮುಂದುವರಿದಿವೆ. ಹಾನಿಗೊಂಡ ಬ್ಲ್ಯಾಕ್ ಬಾಕ್ಸ್‌ನ ಮಾಹಿತಿ ಸಂಗ್ರಹಿಸಲು ಅದನ್ನು ಅಮೆರಿಕದ ವಾಷಿಂಗ್ಟನ್‌ನ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯ ಪ್ರಯೋಗಾಲಯಕ್ಕೆ ಕಳುಹಿಸಬಹುದು ಎಂಬ ವರದಿಗಳಿವೆ. ಆದರೆ ಅಂತಿಮ ನಿರ್ಧಾರವನ್ನು ವಿಮಾನ ಅಪಘಾತ ತನಿಖಾ ದಳವೇ ತೆಗೆದುಕೊಳ್ಳಲಿದೆ ಎಂದು ಕೇಂದ್ರ ವಾಯುಯಾನ ಸಚಿವಾಲಯ ತಿಳಿಸಿದೆ.