ಮತ್ತೆ ನಡುಗಿದ ಪಾಕ್ ನೆಲ – 3 ದಿನದ ಅಂತರದಲ್ಲಿ ಎರಡು ಬಾರಿ ಭೂಕಂಪನ

ಮತ್ತೆ ನಡುಗಿದ ಪಾಕ್ ನೆಲ – 3 ದಿನದ ಅಂತರದಲ್ಲಿ ಎರಡು ಬಾರಿ ಭೂಕಂಪನ

ಇಸ್ಲಾಮಾಬಾದ್: ಪಾಕಿಸ್ತಾನ ಮತ್ತೆ ಭೂಕಂಪದ ಅನುಭವಕ್ಕೆ ಗುರಿಯಾಗಿದೆ. ಮೇ 12ರ ಮಧ್ಯಾಹ್ನ 1:26ಕ್ಕೆ 4.6 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಇದು ಕಳೆದ ಮೂರು ದಿನಗಳಲ್ಲಿ ದಾಖಲಾಗುತ್ತಿರುವ ಎರಡನೇ ಕಂಪನೆಯಾಗಿದ್ದು ಸ್ಥಳೀಯರಲ್ಲಿ ಭೀತಿಯ ವಾತಾವರಣವನ್ನು ಉಂಟುಮಾಡಿದೆ.

ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ನೀಡಿರುವ ಮಾಹಿತಿಯ ಪ್ರಕಾರ, ಈ ಭೂಕಂಪನವು ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆಯಾಗಿದೆ. ಕಂಪನದ ಕೇಂದ್ರಬಿಂದು 29.12° ಉತ್ತರ ಅಕ್ಷಾಂಶ ಮತ್ತು 67.26° ಪೂರ್ವ ರೇಖಾಂಶದಲ್ಲಿ ಪಾಕಿಸ್ತಾನದಲ್ಲಿ ದಾಖಲಾಗಿದೆ. ಭೂಮಿಯ 10 ಕಿಲೋಮೀಟರ್ ಆಳದಲ್ಲಿ ಈ ಭೂಕಂಪ ಸಂಭವಿಸಿದ್ದು, ವ್ಯಾಪಕವಾದ ಪ್ರದೇಶದಲ್ಲಿ ಕಂಪನದ ಅನುಭವವಾಗಿದೆ.

ಭೂಕಂಪದ ಕೇಂದ್ರಬಿಂದು ಪಾಕಿಸ್ತಾನದ ಬಲೂಚಿಸ್ತಾನ್ ಪ್ರದೇಶವಾಗಿದ್ದು, ಇದು ಅಫ್ಘಾನಿಸ್ತಾನ ಗಡಿಗೆ ಸಮೀಪದಲ್ಲಿದೆ. ಭೂಕಂಪ ನಕ್ಷೆಯಲ್ಲಿ ತೋರಿಸಿದ ಪ್ರಕಾರ, ಕಂಪನವು ಕ್ವೆಟ್ಟಾ, ಚಮನ್, ಸಿಬಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಭಾರೀ ಪ್ರಭಾವ ಬೀರಿದೆ. ಜನರು ಭಯದಿಂದ ತಮ್ಮ ಮನೆಗಳಿಂದ ಹೊರಬಂದು ಓಡಿದ ಘಟನೆಗಳು ವರದಿಯಾಗಿವೆ.

ಈ ಹಿಂದೆ ಮೇ 9ರಂದು ಪಾಕಿಸ್ತಾನದಲ್ಲಿ 4.0 ತೀವ್ರತೆಯ ಭೂಕಂಪವೊಂದು ಸಂಭವಿಸಿತ್ತು. ಎರಡನೇ ಭೂಕಂಪ ಕೇವಲ ಮೂರು ದಿನಗಳಲ್ಲೇ ಸಂಭವಿಸಿದ್ದು, ಜನರಲ್ಲಿ ಆತಂಕ ಹೆಚ್ಚಿದೆ

ಅಂತರಾಷ್ಟ್ರೀಯ ರಾಷ್ಟ್ರೀಯ