ದೆಹಲಿ, ಮೇ 10 – ಶಾಂತಿಯ ಹೆಸರಿನಲ್ಲಿ ಮಾತನಾಡಿದ ಪಾಕಿಸ್ತಾನ, ಕೆಲವೇ ಗಂಟೆಗಳಲ್ಲಿ ತನ್ನ ನಿಜಸ್ವರೂಪ ತೋರಿಸಿದೆ. ಸಂಜೆ 5 ಗಂಟೆಗೆ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಕದನ ವಿರಾಮವನ್ನು ಅಧಿಕೃತವಾಗಿ ಘೋಷಿಸಿದ್ದರೂ, ರಾತ್ರಿ 8.30ರ ವೇಳೆಗೆ ಪಾಕಿಸ್ತಾನದಿಂದ ಡ್ರೋನ್ ದಾಳಿ ನಡೆದಿದೆ.
ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಎಕ್ಸ್ನಲ್ಲಿ “ಇದು ಯಾವುದೋ ಕದನ ವಿರಾಮವಲ್ಲ. ಶ್ರೀನಗರ ಮಧ್ಯಭಾಗದಲ್ಲೇ ವಾಯು ರಕ್ಷಣಾ ಘಟಕಗಳು ಕಾರ್ಯಾಚರಣೆ ಆರಂಭಿಸಿವೆ,” ಎಂದು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ ಈ ದಾಳಿಯಿಂದ ಪಾಕಿಸ್ತಾನ ತನ್ನ ಮಾತಿಗೆ ಎಂದೂ ಬದ್ಧವಿಲ್ಲದ ದೇಶವೆಂದು ಮತ್ತೊಮ್ಮೆ ಸಾಬೀತುಪಡಿಸಿದೆ.

