ಮೇ 9, 2025: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಸೆಕ್ಟರ್‌ನಲ್ಲಿ ಪಾಕಿಸ್ತಾನದಿಂದ ನುಸುಳಲು ಯತ್ನಿಸಿದ 7 ಉಗ್ರರನ್ನು ಭಾರತೀಯ ಸೇನೆಯು ಹತ್ಯೆಗೈದಿದೆ. ಈ ಘಟನೆ ಮೇ 8-9ರ ಮಧ್ಯರಾತ್ರಿ ಸಂಭವಿಸಿದ್ದು, ಉಗ್ರರ ಗುಂಪು ಪಾಕಿಸ್ತಾನದಿಂದ ಭಾರತದ ಅಂತರರಾಷ್ಟ್ರೀಯ ಗಡಿಯನ್ನು ದಾಟಲು ಯತ್ನಿಸುತ್ತಿದ್ದಾಗ ಭದ್ರತಾ ಪಡೆಗಳು ಅವರನ್ನು ಪತ್ತೆಹಚ್ಚಿ ತಕ್ಷಣ ಕಾರ್ಯಾಚರಣೆ ನಡೆಸಿದೆ.
ಭದ್ರತಾ ಪಡೆಗಳ ಪ್ರಕಾರ, ಈ ನುಸುಳುಕೋರ ಯತ್ನಕ್ಕೆ ಪಾಕಿಸ್ತಾನದ ರೇಂಜರ್‌ಗಳ ಧಂಧರ್ ಪೋಸ್ಟ್‌ನಿಂದ ಬೆಂಬಲ ದೊರೆತಿತ್ತು. ಭದ್ರತಾ ಪಡೆಗಳು ಈ ನುಸುಳುಕೋರ ಯತ್ನವನ್ನು ವಿಫಲಗೊಳಿಸಿದೆ.

