ಸಿಇಟಿ ಮಾದರಿ ಅಣಕು ಪರೀಕ್ಷೆ: ವಿದ್ಯಾರ್ಥಿಗಳ ಮೆಚ್ಚುಗೆ

ಸಿಇಟಿ ಮಾದರಿ ಅಣಕು ಪರೀಕ್ಷೆ: ವಿದ್ಯಾರ್ಥಿಗಳ ಮೆಚ್ಚುಗೆ

ಕಳೆದ ಮೂರು ತಿಂಗಳಿನಿಂದ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜು ವಾರಕ್ಕೆ ಒಂದರಂತೆ ಸತತ 12 ಸಿಇಟಿ ಮಾದರಿ ಅಣಕು ಪರೀಕ್ಷೆಗಳನ್ನು ಉಚಿತವಾಗಿ ನಡೆಸಿ, ವಿದ್ಯಾರ್ಥಿಗಳು ಮತ್ತು ಪೋಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ), ಕಮಿಟಿ ‘ಬಿ’ ಇದರ ಅಧ್ಯಕ್ಷರಾಗಿರುವ ಡಾ. ರೇಣುಕಾ ಪ್ರಸಾದ್ ಕೆ.ವಿ. ಯವರ ಆಶಯದಂತೆ, ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ. ಹಾಗೂ ಪ್ರಾಂಶುಪಾಲ ಡಾ. ಸುರೇಶ್ ವಿ. ಅವರ ಮಾರ್ಗದರ್ಶನದಲ್ಲಿ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಮುಂಬರುವ ಸಿಇಟಿ ಪರೀಕ್ಷೆಗೆ ತಯಾರಿ ನಡೆಸಲು ಸಹಾಯವಾಗಲೆಂದು ಕಳೆದ ಜನವರಿ ತಿಂಗಳಿಂದ ಆನ್‌ಲೈನ್ ಮೂಲಕ ಈ ಅಣಕು ಪರೀಕ್ಷೆಗಳನ್ನು ಆಯೋಜಿಸಲಾಗಿತ್ತು.

ದಕ್ಷಿಣ ಕನ್ನಡ, ಕೊಡಗು, ಮೈಸೂರು, ಮಂಡ್ಯ, ಹಾಸನ ಮತ್ತು ಇತರ ಜಿಲ್ಲೆಗಳ ಒಟ್ಟು 1645 ವಿದ್ಯಾರ್ಥಿಗಳು ಈ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಸುಮಾರು 1300 ವಿದ್ಯಾರ್ಥಿಗಳು ಈ ಪರೀಕ್ಷೆಯ ಪ್ರಯೋಜನವನ್ನು ಪಡೆದುಕೊಂಡರು. ಈ ಪರೀಕ್ಷೆಯಲ್ಲಿ ಪ್ರತಿವಾರ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಕಾಲೇಜಿನ ವತಿಯಿಂದ 32 ಜಿಬಿ ಪೆನ್‌ಡ್ರೈವ್‌ನ್ನು ಪ್ರೋತ್ಸಾಹಕ ಬಹುಮಾನವಾಗಿ ನೀಡಲಾಯಿತು.

ಜೂನಿಯರ್ ಕಾಲೇಜು, ರೋಟರಿ, ಅಮರಜ್ಯೋತಿ, ಶುಂಠಿಕೊಪ್ಪ, ಮಡಿಕೇರಿ, ಎನ್‌ಎಂಸಿ, ಸೈಂಟ್ ಮೈಕೆಲ್ಸ್, ಸುಬ್ರಮಣ್ಯ, ಕೂಡಿಗೆ, ಫಿಲೋಮಿನಾ, ಅಂಬಿಕಾ, ವಿವೇಕಾನಂದ ಮತ್ತು ಅರಂತೋಡು ಕಾಲೇಜುಗಳ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಈ ಬಹುಮಾನಗಳನ್ನು ಪಡೆದುಕೊಂಡರು.

ಶೈಕ್ಷಣಿಕ