ಚಾಂಪಿಯನ್ಸ್ ಟ್ರೋಫಿ 2025: ಆಸ್ಟ್ರೇಲಿಯಾವನ್ನು ಸೋಲಿಸಿ ಫೈನಲ್‌ಗೆ ದಾಪುಗಾಲಿಟ್ಟ ಭಾರತ!

ಚಾಂಪಿಯನ್ಸ್ ಟ್ರೋಫಿ 2025: ಆಸ್ಟ್ರೇಲಿಯಾವನ್ನು ಸೋಲಿಸಿ ಫೈನಲ್‌ಗೆ ದಾಪುಗಾಲಿಟ್ಟ ಭಾರತ!

ದುಬೈ, ಮಾರ್ಚ್ 4: ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿ 2025 ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು 4 ವಿಕೆಟ್ ಗಳಿಂದ ಸೋಲಿಸಿ ಫೈನಲ್‌ಗೆ ಪ್ರವೇಶಿಸಿದೆ. ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಹೈ ವೋಲ್ಟೇಜ್ ಪಂದ್ಯದಲ್ಲಿ, ವಿರಾಟ್ ಕೊಹ್ಲಿಯ ಅಮೋಘ 84 ರನ್‌ಗಳ ಪ್ರದರ್ಶನ ಮತ್ತು ಮೊಹಮ್ಮದ್ ಶಮಿ (3/48) ಅವರ ಮಾರಕ ಬೌಲಿಂಗ್ ಭಾರತಕ್ಕೆ ಭರ್ಜರಿ ಜಯ ತಂದುಕೊಟ್ಟಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯ ತಂಡ ಭಾರತದ ಉತ್ತಮ ಬೌಲಿಂಗ್ ಗೆ ತತ್ತರಿಸಿ ಕೇವಲ 264 ರನ್ ಗಳಿಗೆ 49.3 ಓವರ್ ನಲ್ಲಿ ಸರ್ವಪತನಗೊಂಡಿತು. 265 ರನ್ ಗಳ ಸುಲಭ ಗುರಿ ಬೆನ್ನಟಿದ ಭಾರತ ಆರಂಭಿಕ 2 ವಿಕೆಟ್ ಗಳನ್ನು ಬಹು ಬೇಗನೆ ಕಳೆದುಕೊಂಡರೂ ನಂತರ ಜೊತೆಯಾದ ವಿರಾಟ್ ಕೋಹ್ಲಿ ಮತ್ತು ಶ್ರೇಯಸ್ ಅಯ್ಯರ್ ತಂಡವನ್ನು ಗೆಲುವಿನ ಕಡೆಗೆ ಕೊಂಡೊಯ್ದರು. ವಿರಾಟ್ ಕೋಹ್ಲಿ 84 ರನ್ ಗಳಿಸಿ ಔಟಾದರೆ ಶ್ರೇಯಸ್ ಅಯ್ಯರ್ 45 ರನ್ ಗಳಿಸಿದರು. ಕೆ ಎಲ್ ರಾಹುಲ್ ಅಜೇಯ 42 ಗಳಿಸಿ ವಿಜಯದ ಹಾದಿ ಸುಗಮಗೊಳಿಸಿದರು ಹಾರ್ಥಿಕ್ ಪಾಂಡ್ಯ 28 ರನ್ ಗಳಿಸಿ ನಿರ್ಗಮಿಸಿದರು. ಅಂತಿಮವಾಗಿ ಭಾರತ 48.1 ಓವರ್ ನಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು ಈ ಜಯದೊಂದಿಗೆ ಭಾರತ ಪೈನಲ್ ಪ್ರವೇಶಿಸಿದೆ.

Uncategorized