ಪಾದಾಚಾರಿ ಮಹಿಳೆಗೆ ಪಿಕಪ್ ವಾಹನ ಡಿಕ್ಕಿ : ಗಂಭೀರ ಗಾಯ.

ಪಾದಾಚಾರಿ ಮಹಿಳೆಗೆ ಪಿಕಪ್ ವಾಹನ ಡಿಕ್ಕಿ : ಗಂಭೀರ ಗಾಯ.

ಬಂಟ್ವಾಳ: ಪಾದಾಚಾರಿ ಮಹಿಳೆಗೆ ಪಿಕಪ್ ವಾಹನ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಿಲಿಮೊಗರು ಗ್ರಾಮದ ಜತ್ತನಕೆರೆ ನಿವಾಸಿ ಪುಷ್ಪಾವತಿ ( 70) ಎಂಬವರು ಗಾಯಗೊಂಡ ಮಹಿಳೆ.

‌ ಬಿಸಿರೋಡಿನಿಂದ ಬಸ್ ನಲ್ಲಿ ಬಂದು ವಾಮದಪದವಿನಲ್ಲಿ ಇಳಿದು ಮನೆ ಕಡೆಗೆ ಹೋಗುವ ವೇಳೆ ಪಿಕಪ್ ಇವರಿಗೆ ಡಿಕ್ಕಿಯಾಗಿದೆ.

ಡಿಕ್ಕಿಯ ರಭಸಕ್ಕೆ ಇವರು ಡಾಮರು ರಸ್ತೆಗೆ ಎಸೆಯಲ್ಪಟ್ಟಿದ್ದು, ತಲೆಗೆ ಗಂಭೀರವಾದ ಗಾಯವುಂಟಾಗಿದೆ.

ಬೆಂಜನಪದವಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸಂಬಂಧಿ ಬಾಲಕನ ಅಂತ್ಯ ಸಂಸ್ಕಾರದ ಕಾರ್ಯ ಮುಗಿಸಿ ವಾಪಸು ಆಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಮಗನ ಜೊತೆಗೆ ಬೈಕಿನಲ್ಲಿ ಬರುವ ವೇಳೆ ಮಳೆ ಬಂದ ಕಾರಣ ತಾಯಿಯನ್ನು ಬಸ್ ನಲ್ಲಿ‌ ಕಳುಹಿಸಿದ್ದ ಎಂದು ಹೇಳಲಾಗಿದೆ. ಪುಂಜಾಲಕಟ್ಟೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಪೋಲೀಸರು ಬೇಟಿ ನೀಡಿದ್ದಾರೆ.

ರಾಜ್ಯ