ಜುಲೈ 19 ರಂದು ” ಹಿರಣ್ಯ”  ಕನ್ನಡ ಸಿನಿಮಾ ರಾಜ್ಯಾಧ್ಯಂತ ತೆರೆಗೆ :ಸುಳ್ಯ ಮೂಲದ ಹೈಕೋರ್ಟ್ ವಕೀಲ ವಿಘ್ನೇಶ್ ನಿರ್ಮಾಣದ ಪ್ರಥಮ ಚಿತ್ರ” ಹಿರಣ್ಯ”

ಜುಲೈ 19 ರಂದು ” ಹಿರಣ್ಯ”  ಕನ್ನಡ ಸಿನಿಮಾ ರಾಜ್ಯಾಧ್ಯಂತ ತೆರೆಗೆ :ಸುಳ್ಯ ಮೂಲದ ಹೈಕೋರ್ಟ್ ವಕೀಲ ವಿಘ್ನೇಶ್ ನಿರ್ಮಾಣದ ಪ್ರಥಮ ಚಿತ್ರ” ಹಿರಣ್ಯ”

ಕರಾವಳಿ ನೆಲ ಪ್ರತಿಭೆಗಳ ತವರು,ವಿಶ್ವದ  ಯಾವುದೇ ಕ್ಷೇತ್ರದಲ್ಲಿ ಕರಾವಳಿಯವರು ಕೈಯಾಡಿಸದೆ ಇರಲಾರದು, ಅದರಲ್ಲೂ ಸಿನಿಮಾ ಕ್ಷೇತ್ರದಲ್ಲಂತು,   ಸ್ಯಾಂಡಲ್ ವುಡ್  ಮಾತ್ರವಲ್ಲದ್ದೆ ಟಾಲಿವುಡ್, ಹಾಲಿವುಡ್, ಬಾಲಿವುಡ್ ಸಿನಿಮಾ ರಂಗದಲ್ಲಿ ಸಲೀಸಾಗಿ ಮಿಂಚುವುದು ಕರಾವಳಿಗರೆ

ಇದೀಗ ಸಿನಿಮಾ ನಿರ್ಮಾಣ ಜವಾಬ್ಧಾರಿ ಹೊತ್ತುಕೊಳ್ಳುವುದರ ಮೂಲಕ ಸುಳ್ಯ ಮೂಲದ ಪ್ರತಿಭೆಯೊಂದು ಸ್ಯಾಂಡಲ್ ವುಡ್ಡಿನಲ್ಲಿ ಹೆಸರು ಮಾಡಲು ಹೊರಟಿದ್ದಾರೆ.

ಹೌದು ಇವರು “ವಿಘ್ನೇಶ್ “ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹರಿಹರ ಪಲ್ಲತಡ್ಕದ ಉಬ್ರಾಳದವರು.ಉಬ್ರಾಳ ಗಿರಿಯಪ್ಪ ಗೌಡ , ತಾಯಿ ಜಾನಕಿ ದಂಪತಿಗಳ  ಪುತ್ರ , ಇವರಿಗೆ ಮೂವರು ಸಹೋದರಿಯರು, ಕಳೆದ 25 ವರ್ಷಗಳಿಂದ ಬೆಂಗಳೂರಿನಲ್ಲಿ ವಕೀಲರಾಗಿದ್ದು, ಪತ್ನಿ ರಾಧಿಕ ಮಕ್ಕಳಾದ ತನಿಷ್  ಮತ್ತು  ಯಜ್ಞ ರೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದಾರೆ ಇವರು ಪ್ರಸ್ತುತ ಹೈಕೂರ್ಟಿನ ಖ್ಯಾತ ವಕೀಲರಲ್ಲೊಬ್ಬರು, ವಕೀಲರಾಗಿದ್ದರೂ ಸಿನಿಮಾ ಇವರ ಆಸಕ್ತಿಯ ಕ್ಷೇತ್ರ, ಬಾಲ್ಯದಲ್ಲಿಯೇ ಕನ್ನಡ ಸಿನಿಮಾ ನೋಡುತ್ತಾ ಸಿನಿಮಾ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡವರು,ಕೊಲ್ಲಮೊಗ್ರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಸುಬ್ರಹ್ಮಣ್ಯದಲ್ಲಿ ಪ್ರೌಢ , ಹಾಗೂ ಕಾಲೇಜು ಶಿಕ್ಷಣ ಪಡೆದು ಬೆಂಗಳೂರಿಗೆ ಹೋಗಿ, ಕಾನೂನು ಪಧವಿ ಪಡೆದು ವಕೀಲ ವೃತ್ತಿಯನ್ನು ಆರಂಭಿಸಿದರು, ಆದರೂ ಸಿನಿಮಾ ರಂಗದ ಆಸಕ್ತಿ ಸದಾ ಜೀವಂತ ವಿತ್ತು…ಇದೇ ಸಂದರ್ಭ ಅವರ ನಿರ್ದೇಶ ಗೆಳೆಯರೊಬ್ಬರು ಒಂದು ಸಿನಿಮಾ ಕಥೆಯನ್ನು ಅವರ ಮಂದೆ ಪ್ರಸ್ತಾಪವಿಟ್ಟ ಬೆನ್ನಲ್ಲೇ ಸಿನಿಮಾ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡರು, ಹೀಗೆ ನಿರ್ಮಾಣವಾದ ಸಿನಿಮಾವೇ”  ಹಿರಣ್ಯ” ತುಂಭಾ ರೋಚಕ ಕಥಾ ಹಂದರವನ್ನು ಹೊಂದಿರುವ ಈ ಸಿನಿಮಾ ಕ್ಷಣ ಕ್ಷಣಕ್ಕೂ ನೋಡುಗರಿಗೆ ಕುತೂಹಲ ಮೂಡಿಸಬಲ್ಲದು ,ಹಿರಿಯನಟ ಡಿಂಗ್ರಿ ನಾಗರಾಜ್ ಅವರ ಪುತ್ರನೂ ಆದ ರಾಜವರ್ಧನ್ ನಾಯಕನಾಗಿ ನಟಿಸಿರುವ ಎರಡನೇ ಚಿತ್ರ ಹಿರಣ್ಯ ಇದೇ ತಿಂಗಳ 19ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ, ಈ ಚಿತ್ರದಲ್ಲಿ ನಾಯಕ ರಾಜವರ್ಧನ್ ಜೋಡಿಯಾಗಿ ಮಾಡೆಲ್ ರಿಹಾನಾ ಅವರು ಕಾಣಿಸಿಕೊಂಡಿದ್ದು, ಈ ಚಿತ್ರದ ಮೂಲಕ ರಿಹಾನಾ ಚಂದನವನ ಪ್ರವೇಶಿಸಿದ್ದಾರೆ.

ತಾಯಿ ಸೆಂಟಿಮೆಂಟ್ ಕಥಾಹಂದರ ಹೊಂದಿರುವ ಈ

ಚಿತ್ರದಲ್ಲಿ ಬಿಗ್‌ ಬಾಸ್ ಖ್ಯಾತಿಯ ದಿವ್ಯಾ ಸುರೇಶ್‌ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಹುಲಿ ಕಾರ್ತಿಕ್, ಅರವಿಂದ್‌ರಾವ್,ದಿಲೀಪ್ ಶೆಟ್ಟಿ ಮುಂತಾದವರು ಈ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಯೋಗೇಶ್ವರನ್ ಆರ್ ಅವರ ಛಾಯಾ ಗ್ರಹಣವಿದೆ ಈ ಚಿತ್ರದ ಐದು ಹಾಡುಗಳಿಗೆ ಜ್ಯೂಡಾ

ಸ್ಯಾಂಡಿ ಅವರ ಸಂಗೀತ ಸ೦ಯೋಜನೆಯಿದೆ.

ಈಗಾಗಲೇ ತನ್ನ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿಕೊಂಡಿರುವ ಹಿರಣ್ಯ ಚಿತ್ರ ಇದೇ ಜುಲೈ 19 ರಂದು ರಾಜ್ಯದಾಧ್ಯಂತ ಎಲ್ಲಾ ಬಹುತೇಕ ಸಿನೀಮಾ ಮಂದಿರದಲ್ಲಿ ಬಿಡುಗಡೆಯಾಗಲಿದ್ದು, ವೀಕ್ಷಕರು ತಮ್ಮ ಥೀಯೇಟರ್ ಗಳಿಗೆ ತೆರಳಿ ಸಿನಿಮಾ ವೀಕ್ಷಸುವುದರ ಮೂಲಕ  ಕರಾವಳಿ ಸುಳ್ಯದ ಪ್ರತಿಬೆಯನ್ನು ಇನ್ನಷ್ಟು ಬೆಳೆಸಿದಂತಾಗಬಲ್ಲುದು..

ರಾಜ್ಯ