ಬಂಟ್ವಾಳದಲ್ಲಿ ಮರಕ್ಕೆ ಸ್ಕೂಟರ್ ಡಿಕ್ಕಿ : ನಾಟಕ ಮುಗಿಸಿ ಬರುತ್ತಿದ್ದ ಕಲಾವಿದ ದಾರುಣ ಸಾವು.

ಬಂಟ್ವಾಳದಲ್ಲಿ ಮರಕ್ಕೆ ಸ್ಕೂಟರ್ ಡಿಕ್ಕಿ : ನಾಟಕ ಮುಗಿಸಿ ಬರುತ್ತಿದ್ದ ಕಲಾವಿದ ದಾರುಣ ಸಾವು.

ಬಂಟ್ವಾಳ ಡಿಸೆಂಬರ್ 31: ಸ್ಕೂಟರ್ ಮರವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸಾವನಪ್ಪಿದ ಘಟನೆ ಬಂಟ್ವಾಳದ ವಗ್ಗ ಸಮೀಪ ನಡೆದಿದೆ, ಮೃತರನ್ನು ಬಂಟ್ವಾಳ ತಾಲೂಕಿನ ದೇವಶ್ಯಪಡೂರು ಗ್ರಾಮದ ಮರಾಯಿದೊಟ್ಟು, ನೂಜೆ ದಿ.ಬೇಬಿ ಅವರ ಪುತ್ರ ಗೌತಮ್ (26) ಎಂದು ಗುರುತಿಸಲಾಗಿದೆ.
ಮೂಡುಬಿದಿರೆ ಪಿಂಗಾರ ಕಲಾವಿದೆರ್ ತಂಡದ ಕಲಾವಿದರಾಗಿದ್ದ ಅವರು ಡಿಸೆಂಬರ್ 30 ರಂದು ಬೆಳುವಾಯಿಯಲ್ಲಿ ನಾಟಕ ಮುಗಿಸಿ ತಡರಾತ್ರಿ ಸುಮಾರು 3ಗಂಟೆಯ ಹೊತ್ತಿಗೆ ಮನೆಗೆ ಹಿಂತಿರುಗುತ್ತಿರುವಾಗ ಅವರ ಸ್ಕೂಟರ್ ಮನೆಯ ಸಮೀಪ ಮರವೊಂದಕ್ಕೆ ಢಿಕ್ಕಿಯಾಗಿ ಗೌತಮ್ ಅವರ ತಲೆಗೆ ಏಟಾಗಿ ರಸ್ತೆಗೆ ಬಿದ್ದಿದ್ದರು. ಬೆಳಗ್ಗೆಯಷ್ಟೆ ಘಟನೆ ಬೆಳಕಿಗೆ ಬಂದಿದ್ದು, ಆಸ್ಪತ್ರೆ ಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.ಅವಿವಾಹಿತರಾಗಿದ್ದ ಅವರು ಬಿ.ಸಿ.ರೋಡ್ ನ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು. ಮೃತರು ತಾಯಿ ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ. ಉತ್ತಮ ನಾಟಕ ಕಲಾವಿದರಾಗಿದ್ದ ಅವರು ಹಲವಾರು ಸಂಘ ಸಂಸ್ಥೆಗಳ ನಾಟಕಗಳಲ್ಲಿ ಪಾತ್ರ ವಹಿಸಿದ್ದರು.

ರಾಜ್ಯ