
ಸುಳ್ಯ ಪೇಟೆಯ ಪೋಲಿಸ್ ಠಾಣೆ ಎದುರು ರಸ್ತೆ ದಾಟುತ್ತಿದ್ದಾಗ ಬೈಕ್ ಡಿಕ್ಕಿ ಹೊಡೆದು ವ್ಯಕ್ತಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಇಂದು ವರದಿಯಾಗಿದೆ.ಮರ್ಕಂಜದ ಕೃತಿಕ್
ಎಂಬವರು ಚಲಾಯಿಸುತ್ತಿದ್ದ ಕೆಟಿಎಂ ಬೈಕ್ ಸುಳ್ಯ ಪೋಲಿಸ್ ಠಾಣೆಯ ಕಟ್ಟೆಕ್ಕಾರ್ ಜಂಕ್ಷನ್ ಬಳಿ ರಸ್ತೆ ದಾಟುತ್ತಿದ್ದ ಕೊಲ್ಟಾರ್ ಮಧುಸೂದನ್ ಎಂಬವರಿಗೆ ಡಿಕ್ಕಿ ಹೊಡೆದಿದೆ ಪರಿಣಾಮ ರಸ್ತೆ ಬಿದ್ದ ಮದುಸೂದನ್ ತಲೆಗೆ ಗಾಯವಾಗಿದ್ದು ಸುಳ್ಯ ಸರಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

