
ಪ್ರೌಢಶಾಲೆ ಚೆಂಬು, ಶಾಲಾ ಅಭಿವೃದ್ಧಿ ಸಮಿತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕ ಸಂಪಾಜೆ ಇವುಗಳ ಆಶ್ರಯದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಜಗದ ಕವಿ ಕುವೆಂಪು ಜನ್ಮ ದಿನೋತ್ಸವವನ್ನು ಆಚರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಶ್ರೀ ರಮೇಶ್ ನಂಬಿಯಾರ್ ವಹಿಸಿದ್ದರು. ಸಭೆಯ ಆರಂಭದಲ್ಲಿ ಕುವೆಂಪು ಭಾವಚಿತ್ರಕ್ಕೆ ದೀಪ ಬೆಳಗಿಸಿಸುವ ಮೂಲಕ ಚಾಲನೆ ನೀಡಲಾಯಿತು.


ವೇದಿಕೆಯಲ್ಲಿ ಕ.ಸಾ. ಪ. ಹೋಬಳಿ ಘಟಕ ಸಂಪಾಜೆ ಇದರ ಅಧ್ಯಕ್ಷರಾದ ಶ್ರೀ ಗೋಪಾಲ ಪೆರಾಜೆ, ಶಾಲಾ ಎಸ್ ಡಿ ಎಂ ಸಿ ಸದಸ್ಯ ಚಂದ್ರಶೇಖರ ಹೊಸೂರು, ಕ.ಸಾ.ಪ. ಹೋಬಳಿ ಘಟಕ ಸಂಪಾಜೆ ಇದರ ಕಾರ್ಯದರ್ಶಿ ಶ್ರೀಮತಿ ಸಂಗೀತ ರವಿರಾಜ್ ಕುವೆಂಪು ಗುಣಗಾನ ಮಾಡಿದರು. ಶಾಲಾ ವಿದ್ಯಾರ್ಥಿಗಳಾದ ಬಿಂದು, ಪ್ರಿಯದರ್ಶಿನಿ ಮತ್ತು ಆಶಿಶ್ ಇವರುಗಳು ಕುವೆಂಪು ಬದುಕು ಬರಹಗಳ ಬಗ್ಗೆ ಪ್ರಬಂಧಗಳ ಮಂಡಿಸಿ ಕುವೆಂಪು ಸಾಧನೆಗಳ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು.
ಸ್ವಾಗತ ಮತ್ತು ಕಾರ್ಯಕ್ರಮ ನಿರ್ವಹಣೆಯನ್ನು ಶಾಲಾ ಶಿಕ್ಷಕರದ ರಂಜಿತ್. ಕೆ ನಿರ್ವಹಿಸಿದರು, ದೈಹಿಕ ಶಿಕ್ಷಕಿ ಸುಜಾತ ಶೆಟ್ಟಿ ವಂದಿಸಿದರು.