
ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಗುಂಡ್ಯ ಎಂಬಲ್ಲಿ ಯುವಕನೊಬ್ಬ ವಿವಾಹವಾದ ಮೂರೇ ದಿನದಲ್ಲಿ ಯುವಕ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ವರದಿಯಾಗಿದೆ.
ಗುಂಡ್ಯ ದಿ.ಕೊರಗಪ್ಪ ಎಂಬವರ ಪುತ್ರ ರಾಜೇಶ್ ಗುಂಡ್ಯ( 29) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ.
ಇಂದು ಬೆಳಗ್ಗೆ ತನ್ನ ಕೋಣೆಯಲ್ಲಿ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಡಿ.21 ರಂದು ಕಾಣಿಯೂರಿನ ಯುವತಿಯನ್ನು ವಿವಾಹವಾಗಿದ್ದು, ಅತಿಥಿ ಸತ್ಕಾರ ಕಾರ್ಯಕ್ರಮವನ್ನು ಡಿ.24 ರಂದು ಸುಳ್ಯದ ಪುರಭವನದಲ್ಲಿ ಏರ್ಪಡಿಸಿದ್ದರು.ಆದರೇ ಅದೇ ದಿನ ಯುವಕ ತೀರಾ ನಿಶಕ್ತಿ ಹೊಂದಿ ನಡೆಯಲಾರದ ಸ್ಥಿತಿಗೆ ಬಂದಿದ್ದ ಎನ್ನಲಾಗಿದೆ, ಕೂಡಲೆ ಮನೆಯವರು ಆಸ್ಪತ್ರೆಗೆ ದಾಖಲು ಮಾಡಿದ್ದರೂ ಎಂದೂ ಹೇಳಲಾಗಿದೆ.ಬಳಿಕ ಅಲ್ಪ ಮಟ್ಟಿಗೆ ಚೆತರಿಸಿ ಮನೆಗೆ ತೆರಳಿದ್ದ ಯುವಕ ತನ್ನ ಪತ್ನಿಯೊಂದಿಗೆ ಗುಂಡ್ಯ ಮನೆಯಲ್ಲಿದ್ದರು.ಆದರೆ ಇಂದು ಬೆಳಗ್ಗೆ ಮನೆಯವರು ಎದ್ದು ಹೋದ ಬಳಿಕ ಅಲ್ಲೇ ಇದ್ದ ಸೀರೆಯನ್ನು ಬಳಸಿ ಈ ಕೃತ್ಯವೆಸಗಿಕೊಂಡಿರುವುದಾಗಿ ತಿಳಿದು ಬಂದಿದೆ. ಮೃತರು ತಾಯಿ ಶ್ರೀಮತಿ ಸುಶೀಲಾ,
ಪತ್ನಿ ಚೈತ್ರಾ ಹಾಗೂ ಕುಟುಂಬಸ್ಥರನ್ನು ,ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತ ಯುವಕ ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ಬಿನ ಸಕ್ರಿಯ ಸದಸ್ಯರಾಗಿ ಗುರುತಿಸಿಕೊಂಡಿದ್ದರು.

