
ಡಿ.28ರಂದು ತಡರಾತ್ರಿ ಕೋಡಿಂಬಾಡಿ ಧರ್ಮಶ್ರೀ ಭಜನಾ ಮಂದಿರದ ತಿರುವಿನಲ್ಲಿಇಕೋಸ್ಪೋರ್ಟ್ಸ್ ಕಾರು ಹಾಗೂ ಈಚರ್ ಲಾರಿ ಮಧ್ಯೆ ಅಪಘಾತ ಸಂಭವಿಸಿ ಕಾರಲ್ಲಿದ್ದ ಮೆಸ್ಕಾಂ ಅಧಿಕಾರಿ ಗಂಭೀರ ಗಾಯಗೊಂಡಿರುವ ಘಟನೆ ಸಂಭವಿಸಿದೆ.
ಉಪ್ಪಿನಂಗಡಿ ಕಡೆಯಿಂದ ಬರುತ್ತಿದ್ದ ಇಕೋಸ್ಪೋರ್ಟ್ಸ್ ಕಾರು ಮತ್ತು ಎದುರುಗಡೆಯಿಂದ ಬರುತ್ತಿದ್ದ ಈಚರ್ ಲಾರಿ ನಡುವೆ ಅಪಘಾತ ಸಂಭವಿಸಿದೆ. ಕಾರಿನ ಮುಂಭಾಗ ಜಖಂಗೊಂಡಿದ್ದು ಕಾರಿನ ಹಿಂಬದಿ ಸೀಟಲ್ಲಿದ್ದ ಮೆಸ್ಕಾಂ ಅಧಿಕಾರಿ ಆನಂದ ಉಕ್ಕುಡ ಎಂಬವರು ತೀವ್ರ ಗಾಯಗೊಂಡಿದ್ದು ಕೂಡಲೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕಾರು ಚಾಲಕ ಲೇಖನ್ ಬನ್ನೂರು ಹಾಗೂ ಇನ್ನೋರ್ವರು ಅಪಾಯದಿಂದ ಪಾರಾಗಿದ್ದಾರೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
