
ಪುತ್ತೂರು : ಕಾಣಿಯೂರು ಸಮೀಪದ ಬೈತಡ್ಕ ಮಸೀದಿ ಸಮೀಪ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಹೊಳೆಗೆ ಬಿದ್ದ ಘಟನೆ ನಡೆದಿದೆ.
ಬೆಳಂದೂರಿನ ಜ್ಯೋತಿಷಿ ಪ್ರಸಾದ್ ಪಂಗಣ್ಣಾಯರ ಮಾರುತಿ ಕಾರು ಬೈತಡ್ಕ ಮಸೀದಿ ಸಮೀಪದ ಹೊಳೆಗೆ ಪಲ್ಟಿಯಾಗಿದ್ದು, ನೀರು ಕಡಿಮೆ ಇದ್ದ ಕಾರಣ ಅವಘಡ ತಪ್ಪಿದಂತಾಗಿದ್ದು, ಪಂಗಣ್ಣಾಯ ರವರು ಅಲ್ಪ-ಸ್ವಲ್ಪ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.ಕಳೆದ ವರ್ಷ ಜುಲೈ ನಲ್ಲಿ ಇದೇ ಸ್ಥಳದಲ್ಲಿ ಕಾರು ಪಲ್ಟಿಯಾಗಿ ಇಬ್ಬರು ಯುವಕರು ನೀರು ಪಾಲಾದ ಘಟನೆ ನಡೆದಿತ್ತು.
