ನಾಳೆ ಪೆರಾಜೆ ಬೆಟ್ಟದಪುರ ಶ್ರೀ ದುರ್ಗಾ ಮಹಾಕಾಳಿ- ನಾಗಬ್ರಹ್ಮ ಕ್ಷೇತ್ರದಲ್ಲಿ ಕೊರಗ ತನಿಯ ದೈವದ ವರ್ಷವಾದಿ ಕೋಲ, ಹರಕೆ ಕೋಲ ಹಾಗೂ ರಾಶಿ ಅಗೇಲು ಸೇವೆ.

ನಾಳೆ ಪೆರಾಜೆ ಬೆಟ್ಟದಪುರ ಶ್ರೀ ದುರ್ಗಾ ಮಹಾಕಾಳಿ- ನಾಗಬ್ರಹ್ಮ ಕ್ಷೇತ್ರದಲ್ಲಿ ಕೊರಗ ತನಿಯ ದೈವದ ವರ್ಷವಾದಿ ಕೋಲ, ಹರಕೆ ಕೋಲ ಹಾಗೂ ರಾಶಿ ಅಗೇಲು ಸೇವೆ.

ಪೆರಾಜೆ ಗ್ರಾಮದ ಅಮಚೂರು ಬೆಟ್ಟದಪುರ ಶ್ರೀ ದುರ್ಗಾ ಮಹಾಕಾಳಿ ನಾಗಬ್ರಹ್ಮ ಕ್ಷೇತ್ರದಲ್ಲಿ ಡಿ.22ರಂದು ಕ್ಷೇತ್ರ ಪಾಲಕ ಶ್ರೀ ಸ್ವಾಮಿ ಕೊರಗ ತನಿಯ ದೈವದ ವರ್ಷವಾದಿ ಕೋಲ, ಹರಕೆ ಕೋಲ ಹಾಗೂ ರಾಶಿ ಅಗೇಲು ಸೇವೆನಡೆಯಲಿದೆ ಎಂದು ಬೆಟ್ಟದಪುರ ಮಹಕಾಳಿ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಲೋಲಾಕ್ಷ ಪ್ರಕಟಣೆಯಲ್ಲಿ ತಿಳಿಸಿದ್ದಾರೆ, ಶುಕ್ರವಾರ ಸಂಜೆ 7 ಗಂಟೆಯಿಂದ ವರ್ಷಾವದಿ ಕೋಲ ಆರಂಭವಾಗಲಿದ್ದುಹರಕೆಯ ಅಥವಾ ಭಕ್ತಿ ಪೂರ್ವಕವಾಗಿ ಸೇವೆ ಸಲ್ಲಿಸುವ ಭಕ್ತಾದಿಗಳು ಇಂದು ಮಧ್ಯಾಹ್ನ 12.00 ಗಂಟೆ ಒಳಗೆ ತಿಳಿಸಬೇಕಾಗಿ ಕ್ಷೇತ್ರದ ವತಿಯಿಂದ ವಿನಂತಿಸಿಕೊಂಡಿದ್ದಾರೆ.

ಸುಂದರ ಪ್ರಕೃತಿಯ ರಮಣೀಯ ತಾಣ ಈ ಬೆಟ್ಟದಪುರ ಕ್ಷೇತ್ರ…

ಸುಳ್ಯಕ್ಕೆ ಅನತಿ ದೂರದಲ್ಲಿರುವ ಮಡಿಕೇರಿ ತಾಲೂಕಿಗೆ ಒಳಪಡುವ ಪೆರಾಜೆ ಗ್ರಾಮದ ಅಮಚೂರಿನ ಬೆಟ್ಟದ ಪುರ ಶ್ರೀ ದುರ್ಗಾ ಮಹಾಕಾಳಿ ನಾಗಬ್ರಹ್ಮ ದೇವಿ ದೇವಸ್ಥಾನದಲ್ಲಿ ದೇವಿ ದರ್ಶನಕ್ಕೆ ಭಕ್ತಾದಿಗಳು ಸುಮಾರು 90 ಮೆಟ್ಟಿಲುಗಳನ್ನು ಹತ್ತಿ ಬರಲೇ ಬೇಕಾದ ಪುಣ್ಯಕ್ಷೇತ್ರ, ಅತೀ ಎತ್ತರವಾದ ಬೆಟ್ಟದ ತುದಿಯಲ್ಲಿ ವಿರಾಜಮಾನವಾಗಿರುವ ದೇವಿಯ ದರುಶನಕ್ಕೆ ಪ್ರತಿದಿನ ನೂರಾರು ಭಕ್ತಾದಿಗಳು ಬರುತ್ತಿದ್ದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಂಡ ಸಂತೃಪ್ತಿಯಲ್ಲಿ ದೇವಿಗೆ ಭಕ್ತಿಯಿಂದ ನಮಿಸಿ ತೆರಳುವ ದೃಶ್ಯ ಸದಾ ಕಂಡುಬರುತ್ತದೆ.ಇದೊಂದು ಭಕ್ತಿತಾಣ ಮಾತ್ರವಲ್ಲ ಸುಂದರ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಬಹುದಾದ ಪ್ರವಾಸಿರ ಸ್ವರ್ಗ ಎನಿಸಬಹುದಾದ ಸ್ಥಳ.

ರಾಜ್ಯ