ಮಂಗಳೂರು: ತಾಯಿ ಜೊತೆ ಮೂರು ವರ್ಷದ ಮಗು ನಾಪತ್ತೆ..!

ಮಂಗಳೂರು: ತಾಯಿ ಜೊತೆ ಮೂರು ವರ್ಷದ ಮಗು ನಾಪತ್ತೆ..!

ವ್ಯಕ್ತಿಯೋರ್ವರು ಬಜಪೆ ಪೊಲೀಸ್‌ ಠಾಣೆಯಲ್ಲಿ ಪತ್ನಿ ಹಾಗೂ ಮೂರು ವರ್ಷದ ಪುತ್ರ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ.

ಕಾಣೆಯಾದವರು ಬಜ್ಪೆಯ ಕೆ.ಪಿ. ನಗರದ ಶಾಹಿಸ್ತಾ ಮಂಜೀಲ್‌ನ ಅಹ್ಮದ್‌ ಮಕ್ಸೂದ್‌ ಅವರ ಪತ್ನಿ ಶರೀನಾ ವೈ. (24) ಮತ್ತು ಮಗ ಮಹ್ಮದ್‌ ತೋಹಾರ್‌ (3) ಎಂದು ಗುರತಿಸಲಾಗಿದೆ.

ಅಹ್ಮದ್‌ ಮಕ್ಸೂದ್‌ ಅವರು ತಾಯಿ ಮತ್ತು ಪತ್ನಿಯೊಂದಿಗೆ ವಾಸವಾಗಿದ್ದು ಸುಮಾರು 6 ವರ್ಷಗಳ ಹಿಂದೆ ಸುಳ್ಯದ ಶರಿನಾ (24) ಅವರನ್ನು ವಿವಾಹವಾಗಿದ್ದು ಈ ದಂಪತಿಗಳಿಗೆ 3 ವರ್ಷದ ಗಂಡು ಮಗುವಿದೆ. ಶರೀನಾ 5 ತಿಂಗಳ ಗರ್ಭಿಣಿಯಾಗಿದ್ದು ದಂಪತಿ ಅನ್ಯೋನ್ಯವಾಗಿದ್ದು, ರಾತ್ರಿ ಎಲ್ಲರೂ ಮಲಗಿದ್ದಾಗ ಶರೀನಾ ಪುತ್ರನೊಂದಿಗೆ ಮನೆ ಬಿಟ್ಟು ಹೋಗಿದ್ದರು. ಮರುದಿನ ಬೆಳಗ್ಗೆ ಮನೆಯ ಎದುರಿನ ಸಿಸಿ ಕೆಮರಾ ಪರಿಶೀಲಿಸಿದಾಗ ಅದು ದೃಢಪಟ್ಟಿದೆ. ಶರೀನಾ ಬಟ್ಟೆಬರೆ ಹಾಗೂ 5 ಗ್ರಾಂ ಚಿನ್ನದ ಆಭರಣ ತೆಗೆದುಕೊಂಡು ಹೋಗಿದ್ದು ತಾಯಿ ಮನೆಗೆ ಹೋಗುತ್ತಿರುವುದಾಗಿ ಬ್ಯಾರಿ ಭಾಷೆಯಲ್ಲಿ ಚೀಟಿ ಬರೆದಿಟ್ಟು ಹೋಗಿದ್ದಾರೆ. ಆದರೆ ಅವರ ತಾಯಿಗೆ ಫೋನ್‌ ಮಾಡಿ ವಿಚಾರಿಸಿದಾಗ ಅಲ್ಲಿಗೆ ತಲುಪಿರಲಿಲ್ಲ. ನೆರೆಕೆರೆ, ನೆಂಟರ ಮನೆಯಲ್ಲಿ ಹುಡುಕಾಡಿದ್ದು ಎಲ್ಲಿಯೂ ಪತ್ತೆಯಾಗದ ಹಿನ್ನೆಲೆಯಲ್ಲಿ ಅಹ್ಮದ್‌ ಮಕ್ಸೂದ್‌ ಡಿಬಜ್ಪೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ರಾಜ್ಯ