
ಸಿರಿಕುರಲ್ ನಗರ ಶ್ರೀ ವನದುರ್ಗಾ ರಕ್ತೇಶ್ವರಿ ಪರಿವಾರ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ:ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮಕ್ಕೆ ಒಳಪಡುವ ಪೆರಾಜೆ ಗ್ರಾಮದ ಬಳಿ ಕಲ್ಚರ್ಪೆಯ ಸಿರಿ ಕುರಲ್ ನಗರದ ಶ್ರೀ ವನದುರ್ಗಾ ರಕ್ತೇಶ್ವರಿ ಪರಿವಾರ ದೈವಗಳ ಸೇವಾ ಟ್ರಸ್ಟ್ ಮತ್ತು ಉತ್ಸವ ಸಮಿತಿಯ ಆಶ್ರಯಲ್ಲಿ ಶ್ರೀ ವನದುರ್ಗಾ ರಕ್ತೇಶ್ವರಿ ಪರಿವಾರ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ಬಾರೀ ವಿಜ್ರಂಭಣೆಯಿಂದ ನಡೆಯಿತು.ಡಿ.12 ರಂದು ಬೆಳಿಗ್ಗೆ ಗಂಟೆ 7.30ರಿಂದ ಬಿ.ಶಂಕರನಾರಾಯಣ ಕಡಮಣ್ಣಾಯ ಬಂಬ್ರಾಣ ತಂತ್ರಿವರ್ಯರ ನೇತೃತ್ವದಲ್ಲಿ ಸ್ಥಳ ಶುದ್ದಿ, ಗಣಹೋಮ, ವನದುರ್ಗಾ ಹೋಮ, ಆಶ್ಲೇಷ ಬಲಿ, ತಂಬಿಲ ಸೇವೆ ಮೊದಲಾದ ವೈದಿಕ ಕಾರ್ಯಕ್ರಮ ನಡೆಯಿತು ಮಧ್ಯಾಹ್ನ 12.30 ಕ್ಕೆ ಮಹಾಪೂಜೆಯಾಗಿ ಪ್ರಸಾದ ವಿತರಣೆಯ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಸಲಾಯಿತು.ಸಂಜೆ ಗಂಟೆ 6 ರಿಂದ ಶ್ರೀ ಗುಳಿಗ ದೈವದ ಕೋಲ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನ ಸಂತರ್ಪಣೆಯು ನಡೆಯಿತು ವಾರ್ಷಿಕ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ಗಂಟೆ 7 ರಿಂದ ಸಂಜೆ 4 ಗಂಟೆಯ ತನಕ ತಾಲೂಕಿನ ವಿವಿಧ ಭಜನಾ ಮಂಡಳಿಯ ಭಜಕರಿಂದ ನಿರಂತರ ಭಜನಾ ಕಾರ್ಯಕ್ರಮ ಸಂಯಂಕಾಲದ ವರೆಗೆ ನಡೆಯಿತು.

ಸಭಾ ಕಾರ್ಯಕ್ರಮಕಾರ್ಯಕ್ರಮದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಉತ್ಸವ ಸಮಿತಿಯ ಗೌರವಾಧ್ಯಕ್ಷ ವಾಸುದೇವ ಗೌಡ ಕುಡೆಕಲ್ಲು ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಯಾಗಿದ್ದ ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ,ನಗರ ಪಂಚಾಯತ್ ಸದಸ್ಯ ಎಂ.ವೆಂಕಪ್ಪ ಗೌಡ ,ಸೂರ್ತಿಲ ಶ್ರೀ ರಕ್ತೇಶ್ವರಿ ಕ್ಷೇತ್ರದ ಅಧ್ಯಕ್ಷ ನಾರಾಯಣ ಕೇಕಡ್ಕ ,ಆಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವೀಣಾ ಕುಮಾರಿ, ಅನಿತಾ ಇಡ್ಯಡ್ಕ, ವೇದಾವತಿ ನೆಡ್ಚಿಲ್,ಉತ್ಸವ ಸಮಿತಿ ಅಧ್ಯಕ್ಷ ಕರುಣಾಕರ ಪಾಲಡ್ಕ, ಲೋಕೇಶ್ ಸುಳ್ಳಿ, ಮೊದಲಾದವರು ವೇದಿಕೆಯಲ್ಲಿದ್ದರು.ಶ್ರೀ ವನದುರ್ಗಾ ರಕ್ತೇಶ್ವರಿ ಪರಿವಾರ ದೈವಗಳ ಸೇವಾ ಟ್ರಸ್ಟ್ನ ಅಧ್ಯಕ್ಷ ಕೆ.ಗೋಕುಲ್ದಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮದಸಂಚಾಲಕರಾದ ಅಶೋಕ್ ಪೀಚೆ ಸ್ವಾಗತಿಸಿ, ಗ್ರಾಮ ಪಂಚಾಯತ್ ಸದಸ್ಯ ಸುಧೇಶ್ ಅರಂಬೂರು ಧನ್ಯವಾದ ಸಮರ್ಪಿಸಿದರು. ಶಶಿಧರ ಎಂ.ಜೆ.ಕಾರ್ಯಕ್ರಮ ನಿರೂಪಿಸಿದರು.


