ಸುಳ್ಯದಲ್ಲಿ ಇಸ್ರೋ ಸಂಸ್ಥೆಯ “ಸ್ಪೇಸ್ ಆನ್ ವ್ಹೀಲ್” ಮೊಬೈಲ್ ಬಸ್: ಸಾವಿರಾರು ವಿದ್ಯಾರ್ಥಿಗಳಿಂದ ಬಾಹ್ಯಾಕಾಶ ಯೋಜನೆಗಳ ಮಾದರಿ ವೀಕ್ಷಣೆ.

ಸುಳ್ಯದಲ್ಲಿ ಇಸ್ರೋ ಸಂಸ್ಥೆಯ “ಸ್ಪೇಸ್ ಆನ್ ವ್ಹೀಲ್” ಮೊಬೈಲ್ ಬಸ್: ಸಾವಿರಾರು ವಿದ್ಯಾರ್ಥಿಗಳಿಂದ ಬಾಹ್ಯಾಕಾಶ ಯೋಜನೆಗಳ ಮಾದರಿ ವೀಕ್ಷಣೆ.

ಭಾರತದ ಹೆಮ್ಮೆಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಇಸ್ರೋದ ಸಾಧನೆಗಳನ್ನು ಪರಿಚಯಿಸುವ “ಸ್ಪೇಸ್ ಆನ್ ವ್ಹೀಲ್” ಮೊಬೈಲ್ ಬಸ್ ಸುಳ್ಯಕ್ಕೆ ಆಗಮಿಸಿತು, ಸುಳ್ಯ ಚೆನ್ನಕೇಶವ ದೇವಸ್ಥಾನ ವಠಾರದಲ್ಲಿ ಬೆಳಿಗ್ಗೆ 9.30 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಬಾಹ್ಯಾಕಾಶ ಯೋಜನೆಗಳ ಮಾದರಿವೀಕ್ಷಣೆಗೆ ಅನುವು ಮಾಡಿಕೊಡಲಾಯಿತು .

ದಕ್ಷಿಣ ಕನ್ನಡ ವಿಜ್ಞಾನ ಪ್ರತಿಷ್ಠಾನ ಮತ್ತು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಪ್ರೌಢ ಶಾಲಾ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮತ್ತು ಬಾಹ್ಯಾಕಾಶ ವಿಷಯಗಳಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇದರಲ್ಲಿ ಚಂದ್ರಯಾನ-1, ಮಂಗಳಯಾನ, ರಾಕೆಟ್ ಉಡ್ಡಯನ ಕೇಂದ್ರ, ಸಂವಹನ ಉಪಗ್ರಹ, ಆರ್ಯಭಟ, ಭಾಸ್ಕರ ಮೊದಲಾದ ಈ ಹಿಂದಿನ ಉಪಗ್ರಹಗಳ ಮಾದರಿಗಳು, ಅದೇ ರೀತಿ ಮುಂದಿನ ಬಾಹ್ಯಾಕಾಶ ಯೋಜನೆ ಗಗನ್ ಯಾನ್ 2024ರ ಮಾದರಿಗಳು ಹಾಗೂ ಇನ್ನಿತರ ಬಾಹ್ಯಾಕಾಶ ಯೋಜನೆಗಳ ಮಾದರಿಗಳು ಹತ್ತಿರದಿಂದ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.


ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸರತಿ ಸಾಲಿನಲ್ಲಿ ಬಂದು ವೀಕ್ಷಿಸತೊಡಗಿದರು. ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಡಾ. ಅನುರಾಧಾ ಕುರುಂಜಿ ಹಾಗೂ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಅಧಿಕಾರಿಗಳು ಮಾಹಿತಿಯನ್ನು ನೀಡುತ್ತಿದ್ದರು.

ರಾಜ್ಯ