
ಪೆರಾಜೆ ಅಲ್ ಅಮೀನ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಾದಕ ವ್ಯಸನದ ವಿರುದ್ದ ಭಾರತದಾದ್ಯ ಜನಜಾಗೃತಿ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು ಇದರ ಆರಂಭವಾಗಿ ಅ. 12ರಂದು ಪೆರಾಜೆಯಿಂದ ಕನ್ಯಾಕುಮಾರಿ ವರೆಗೆ ಮಾದಕ ವ್ಯಸನದ ವಿರುದ್ದ ಜನಜಾಗೃತಿ ಯಾತ್ರೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಟ್ರಸ್ಟ್ ನ ಅಧ್ಯಕ್ಷರಾದ ಉನೈಸ್ ಪೆರಾಜೆ ಹೇಳಿದ್ದಾರೆ. ಅವರು ಇಂದು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ ಇದೀಗ ನಾಡಿನೆಲ್ಲೆಡೆ ಯುವ ಜನತೆ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ ಅಲ್ಲದೇ ಕೆಲವು ಕಡೆಗಳಲ್ಲಿ ಈ ದುಷ್ಛಟಕ್ಕೆ ಬಲಿಯಾಗಿ ತಮ್ಮ ಪ್ರಾಣವನ್ನೆ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದ್ದು ಈ ಬೆಳವಣಿಗೆ ಮುಂದಿನ ಪೀಳಿಗೆಗೆ ಮಾರಕವಾಗಿದ್ದು ಮುಂಬರುವ ಯುವ ಜನತೆಯನ್ನು ಎಚ್ಚರಿಸಲು ಸಮಾಜವನ್ನು ಮಾದಕ ವ್ಯಸನದಿಂದ ಮುಕ್ತಿಗೊಳಿಸುವ ಸಂಕಲ್ಪದೊಂದಿಗೆ ಭಾರತದಾಧ್ಯಂತ ಜನ ಜಾಗೃತಿ ಯಾತ್ರೆ ನಡೆಸಲಾಗುವುದು, ಮೊದಲ ಹಂತದಲ್ಲಿ ಪೆರಾಜೆಯಿಂದ ಕನ್ಯಾಕುಮಾರಿ ಮರೆಗಿನ ಯಾತ್ರೆಗೆ ನಾಳೆ ಚಾಲನೆ ನೀಡಲಿದ್ದೆವೆ , ಅಲ್ಲದೇ ಮುಂದಿನ ದಿನಗಳಲ್ಲಿ ನಾವು ಪಶ್ಚಿಮ ಬಂಗಾಳ ತನಕ ಹಮ್ಮಿಕೊಳ್ಳಲಿದ್ದೇವೆ ಎಂದು ಹೇಳಿದರು ಈ ಪತ್ರಿಕಾಗೋಷ್ಠಿಯಲ್ಲಿ ಅಶ್ರಫ್ ಡಿ ಎಂ , ಲತೀಫ್ ಪಿ ಎ , ಅಬ್ದುಲ್ ರಝಾಕ್ , ಅಶ್ರಫ್ ಪಿ ಎಂ , ಇಸಾಮುದ್ದಿನ್ , ಮತ್ತಿತರರು ಉಪಸ್ಥಿತರಿದ್ದರು.


