
ಸುಳ್ಯ ವೀರಕೇಸರಿ ದಸರಾ ಉತ್ಸವ ಸಮಿತಿಯ ಸಭೆ ಅ.೨ ರಂದು ಸುಳ್ಯದ ವಿಷ್ಣು ಸರ್ಕಲ್ ಬಳಿ ನಡೆಯಿತು, ಸತತ ೧೮ ವರ್ಷಗಳಿಂದ ಸಮಿತಿಗಳನ್ನು ರಚಿಸಿ ಸುಳ್ಯ ಶಾರದಾಂಭ ದಸರಾ ಸಂಭ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಾ , ಆಕರ್ಷಕ ಸ್ಥಬ್ಧ ಚಿತ್ರಗಳನ್ನು ಪ್ರಾಯೋಜಿಸುತ್ತಾ ಸುಳ್ಯದ ಅತ್ಯುತ್ತಮ ತಂಡವಾಗಿ ಸೇವೆ ಸಲ್ಲಿಸುತ್ತಿರುವ ವೀರ ಕೇಸರಿ ತಂಡ ೨೦೨೩ ನೇ ಸಾಲಿನ ದಸರಾ ಉತ್ಸವ ಸಮಿತಿಯನ್ನು ರಚಿಸಿದ್ದು ನೂತನ ಅಧ್ಯಕ್ಷರಾಗಿ ಪ್ರಜ್ವಲ್ ಆಯ್ಕೆಯಾಗಿದ್ದಾರೆ, ಕಾರ್ಯದರ್ಶಿಯಾಗಿ ಮೋಹನ್ ದಾಸ್ ಪಂಜ, ಕೋಶಾಧಿಕಾರಿಯಾಗಿ ಯತೀಶ್ ಪರಿವಾರಕಾನ ಹಾಗೂ ಗೌರವಾಧ್ಯಕ್ಷರಾಗಿ ಗೋಕುಲ್ ದಾಸ್ ಸುಳ್ಯ, ಉಪಾದ್ಯಕ್ಷರಾಗಿ ದೀಪಕ್ ಪಿ ಎಸ್, ರವರನ್ನು ಆಯ್ಕೆ ಮಾಡಲಾಗಿದೆ.




