
ಸೆ.೯ ರಂದು ಮಂಗಳೂರಿನ ಕಂಕನಾಡಿಯಲ್ಲಿ ಕೋರ್ ಟೆಕ್ನಾಲಜೀಸ್ ಇದರ ಮೂರನೇ ಶಾಖೆ ಶುಭಾರಂಭಗೊಂಡಿತು,ಶಾಖೆಯನ್ನು ಸಂಸ್ಥೆ ಮಾಲಕ ಅನೂಪ್ ಕೆ ಜೆ ಯವರ ತಂದೆ ಜನಾರ್ಧನ ಗೌಡ ತಾಯಿ ಕುಸುಮಾ ದಂಪತಿಗಳು ಉದ್ಘಾಟಿಸಿದರು.ಕೆ ಸಿ ಸಿ ಐ ಇಂಡಸ್ಟ್ರೀಸ್ ಹಾಗೂ ಕೆನರಾ ಚೇಂಬರ್ಸ್ ಆಫ್ ಕಾಮರ್ಸ್ ಇದರ ಅಧ್ಯಕ್ಷ ಗಣೇಶ್ ಕಾಮತ್ ದೀಪ ಬೆಳಗಿಸಿ ಶುಭ ಹಾರೈಸಿದರು,ಮಂಗಳೂರು ಸಿ ಟಿ ಕಾರ್ಪೋರೇಷನ್ ಕೌನ್ಸಿಲರ್ ಆಗಿರುವ ಕಾವ್ಯ ನಟರಾಜ್ , ಹಾಗೂ ಸಂದೀಪ್ ಗರೋಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು , ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆ ಮಾಲಕ ಅನೂಪ್ ಕೆ ಜೆ ನಮ್ಮಲ್ಲಿ ನವೀಕರಣ ಗೊಂಡ ಅಥವಾ ಬಳಸಿದ ಲ್ಯಾಪ್ ಟಾಪ್ಸ್ ಕೇವಲ 10,000 ಕ್ಕೆ , ಹಾಗೂ ನವೀಕರಣಗೊಂಡ ಅಥವಾ ಬಳಸಿದ ಡೆಸ್ಕ್ ಟಾಪ್ಸ್ ಕೇವಲ 11,000 ಕ್ಕೆ ಡೆಸ್ಕ್ ಟಾಪ್ ಗಳನ್ನು ಒಂದು ವರ್ಷದ ವಾರಂಟಿಯೊಂದಿಗೆ ಮಾರಾಟ ಮಾಡಲಾಗುವುದು, ಅಲ್ಲದೆ ಹೊಚ್ಚ ಹೊಸ ಪ್ರತಿಷ್ಠಿತ ಕಂಪೆನಿ ಲ್ಯಾಪ್ ಟಾಪ್ಸ್ , ಡೆಸ್ಕ್ ಟಾಪ್ಸ್ ಹಾಗೂ ಬಿಡಿ ಬಾಗಗಳು ನಮ್ಮಲ್ಲಿ ಮಾರಾಟ ಮಾಡಲಾಗುತ್ತಿದೆ, ಈಗಾಗಲೇ ಸುಳ್ಯ ಮತ್ತು ಪುತ್ತೂರಿನಲ್ಲಿ ಎರಡು ಶಾಖೆಗಳನ್ನು ತೆರೆದಿದ್ದು ಇದೀಗ ಮಂಗಳೂರಿನ ಗ್ರಾಹಕರ ಬೇಡಿಕೆಯಂತೆ ಮಂಗಳೂರಿನ ಕಂಕನಾಡಿಯಲ್ಲಿ ಶಾಖೆ ತೆರೆದಿದ್ದು ಗ್ರಾಹಕರು ಸಹಕರಿಸುವಂತೆ ವಿನಂತಿಸಿಕೊಂಡರು, ಶ್ರೀಯಸ್ವಿ ಅನೂಪ್ ಸ್ವಾಗತಿಸಿದರು, ಮಿಥುನ್ ವಿದ್ಯಾಪುರ ಪ್ರಾರ್ಥಿಸಿ, ರವಿಚಂದ್ರ ಕಾರ್ಯಕ್ರಮ ನಿರೂಪಿಸಿದರು , ಈ ಸಂದರ್ಭದಲ್ಲಿ ನೂರಾರು ಗ್ರಾಹಕರು ಅತ್ಯಂತ ಕಡಿಮೆ ದರದಲ್ಲಿ ಕಂಪ್ಯೂಟರ್ ಖರೀದಿಸಿ ಸಹಕರಿಸಿದರು.




