ಮಂಗಳೂರು: ಕೇರಳ ಮೂಲದ ಬ್ಯಾಂಕ್ ಅಧಿಕಾರಿ ಮಂಗಳೂರಿನ ಸ್ವಿಮ್ಮಿಂಗ್ ಪೂಲ್ ನಲ್ಲಿ ಶವವಾಗಿ ಪತ್ತೆ.

ಮಂಗಳೂರು: ಕೇರಳ ಮೂಲದ ಬ್ಯಾಂಕ್ ಅಧಿಕಾರಿ ಮಂಗಳೂರಿನ ಸ್ವಿಮ್ಮಿಂಗ್ ಪೂಲ್ ನಲ್ಲಿ ಶವವಾಗಿ ಪತ್ತೆ.

ಮಂಗಳೂರು: ನಗರದ ಪ್ರತಿಷ್ಠಿತ ಹೊಟೇಲೊಂದರ ಸ್ವಿಮ್ಮಿಂಗ್ ಪೂಲ್ ನಲ್ಲಿ ಬ್ಯಾಂಕ್ ಅಧಿಕಾರಿಯೊಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ಇಂದು ಬೆಳಕಿಗೆ ಬಂದಿದೆ.ನಗರದ ಇಲ್ಲಿನ ಮೋತಿಮಹಲ್ ಹೊಟೇಲ್ ನ ಸ್ವಿಮ್ಮಿಂಗ್ ಪೂಲ್ ನಲ್ಲಿ ಈ ಮೃತದೇಹ ಪತ್ತೆಯಾಗಿದ್ದು, ಮೃತ ವ್ಯಕ್ತಿಯನ್ನು ಕೇರಳದ ತಿರುವನಂತಪುರಂ ನಿವಾಸಿ ಗೋಪು ಆರ್. ನಾಯರ್ ಎಂದು ಗುರುತಿಸಲಾಗಿದ್ದು, ಇವರು ಯೂನಿಯನ್ ಬ್ಯಾಂಕ್ ನಲ್ಲಿ ಅಧಿಕಾರಿಯಾಗಿದ್ದರು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.ಗೋಪು ಅವರು ಮಂಗಳೂರಿಗೆ ಬಂದು ಈ ಹೊಟೇಲ್ ರೂಂನಲ್ಲಿ ಉಳಿದುಕೊಂಡಿದ್ದರು.ಇಂದು ಬೆಳಿಗ್ಗೆ 4 ಗಂಟೆಗೆ ಗೋಪು ಹೊಟೇಲ್ ರೂಂನಿಂದ ಹೊರಹೋಗಿದ್ದಾರೆ. ಬಳಿಕ ಅವರ ಮೃತದೇಹ ಹೊಟೇಲಿನ ಸ್ವಿಮ್ಮಿಂಗ್ ಪೂಲ್ ನಲ್ಲಿ ಪತ್ತೆಯಾಗಿದೆ.ಮೃತ ವ್ಯಕ್ತಿಯ ಬಟ್ಟೆಗಳು ಸ್ವಿಮ್ಮಿಂಗ್ ಪೂಲ್ ಮೇಲ್ಬಾಗದ ರೆಸ್ಟಿಂಗ್ ಬೆಡ್ ಮೇಲೆ ಪತ್ತೆಯಾಗಿದ್ದು, ಇವರು ಈಜಾಡಲು ಇಳಿದಿರುವವರು ಬಳಿಕ ಯಾವುದೋ ಕಾರಣದಿಂದ ನೀರಿನಲ್ಲೇ ಮೃತಪಟ್ಟಿರಬಹುದೆಂಬ ಶಂಕೆ ಇದೀಗ ಮೇಲ್ನೋಟಕ್ಕೆ ವ್ಯಕ್ತವಾಗಿದೆ.ಘಟನಾ ಸ್ಥಳಕ್ಕೆ ಇದೀಗ ಪಾಂಡೇಶ್ವರ ಠಾಣಾ ಪೊಲೀಸರು ಭೇಟಿ ನೀಡಿದ್ದುಸ್ಥಳ ಪರಿಶೀಲನೆ ನಡೆಸಿ ಸೂಕ್ತ ಮಾಹಿತಿ ಕಲೆ ಹಾಕುತ್ತಿದ್ದಾರೆ.

ರಾಜ್ಯ