ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದ ಸುವರ್ಣ ರಂಗಮಂದಿರದಲ್ಲಿ ವಿಜ್ರಂಬಿಸಿದ ಜನಪದ ಸಾಂಸ್ಕೃತಿಕ ವೈಭವ ನಲಿಪು – 2023.

ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದ ಸುವರ್ಣ ರಂಗಮಂದಿರದಲ್ಲಿ ವಿಜ್ರಂಬಿಸಿದ ಜನಪದ ಸಾಂಸ್ಕೃತಿಕ ವೈಭವ ನಲಿಪು – 2023.

ಭಾರತ ದೇಶ ತನ್ನದೇ ಆದ ಸಾಂಸ್ಕೃತಿಕ ಪರಂಪರೆ ಹೊಂದಿದ ದೇಶ ,ಇಲ್ಲಿ ನಡೆಯುವ ಪ್ರತಿ ಆಚಾರ ವಿಚಾರದಲ್ಲಿ ಈ ಮಣ್ಣಿನ ಜನಪದೀಯ ಸೊಗಡು ಮುಖ್ಯ ಪಾತ್ರವನ್ನು ವಹಿಸುತ್ತದೆ, ದೇಶದ ಯಾವುದೇ ಭಾಗಕ್ಕೆ ಹೋದರು ಈ ದೇಶದಲ್ಲಿ ತನ್ನದೇ ಆದ ಬೇರೆ ಬೇರೆ ವೈಶಿಷ್ಠ್ಯತೆ ಹೊಂದಿದವರಿದ್ದಾರೆ ಇದಕ್ಕೆಲ್ಲಾ ಮೂಲಕಾರಣ ಈ ಮಣ್ಣಿನ ಜನಪದ ಕಲೆ ಮತ್ತು ಜನಪದ ಕ್ರೀಡೆ, ಜನಪದ ಸಂಸ್ಕೃತಿ ಜೀವಂತವಾಗಿ ಉಳಿಯಬೇಕಾದರೆ ಆಡಳಿತ ನಡೆಸುವ ಸರಕಾರಗಳು ಯುವಜನ ಸಂಯುಕ್ತ ಮಂಡಳಿಗಳಿಗೆ ಸವಲತ್ತು ನೀಡುವುದರ ಮೂಲಕ ಯುವಕರನ್ನು ಉತ್ತೇಜಿಸುವ ಕೆಲಸಮಾಡಬೇಕಿದೆ ಎಂದು ಮಾಜಿ ಸಚಿವ ಎಸ್.ಅಂಗಾರ ರವರು ಹೇಳಿದ್ದಾರೆ.ಅವರು ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದ ಸುವರ್ಣ ರಂಗಮಂದಿರದಲ್ಲಿ ಸೆ.2 ರಂದು ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಆಶ್ರಯದಲ್ಲಿ ನಡೆದ ಜನಪದ ಸಾಂಸ್ಕೃತಿಕ ವೈಭವ ನಲಿಪು – 2023 ರ ಜನಪದ ಪ್ರಕಾರಗಳ ಮುಕ್ತ ನೃತ್ಯ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕಿನಲ್ಲಿ ರಾಜ್ಯ ಮಟ್ಟದ ಯುವಜನ ಮೇಳ ಹಮ್ಮಿಕೊಳ್ಳುವ ಮೂಲಕ ಸರಕಾರದ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಅಮರಮುಡ್ನೂರು ಅಮರಪಡ್ನೂರು ಅವಳಿ ಗ್ರಾಮ ಓರ್ವ ಖ್ಯಾತ ಕವಿಯನ್ನು ಜನಪದ ಕ್ಷೇತ್ರಕ್ಕೆ ಕೊಡುಗೆ ನೀಡಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ರವರು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಅಮರಮುಡ್ನೂರು ಪಂಚಾಯತ್ ಅಧ್ಯಕ್ಷೆ ಜಾನಕಿ ಕಂದಡ್ಕ,ಬೆಳ್ಳಾರೆ ಕಾಮಧೇನು ಗ್ರೂಪ್ಸ್ ಮಾಲಕ ಮಾಧವ ಗೌಡ ಬೆಳ್ಳಾರೆ, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ರಾಜ್ಯ ಯುವಜನ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು, ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕೇಶವ ಕರ್ಮಜೆ,ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿ ಸಂಚಾಲಕ ರಾಧಾಕೃಷ್ಣ ಬೊಳ್ಳೂರು, ಪೈಲಾರು ಸ.ಹಿ.ಪ್ರಾ.ಶಾಲೆಯ ಶತಮಾನೋತ್ಸವ ಸಮಿತಿ ಅಧ್ಯಕ್ಷ ಜಯಶಿವ ಮಡಪ್ಪಾಡಿ, ‌ಯುವಜನ ಸಂಯುಕ್ತ ಮಂಡಳಿಯ ಪೂರ್ವಾಧ್ಯಕ್ಷ ಶಿವಪ್ರಕಾಶ್ ಕಡಪಳ, ಚೊಕ್ಕಾಡಿ ಗರುಡ ಯುವಕ ಮಂಡಲದ ಅಧ್ಯಕ್ಷ ಮನೋಜ್ ಪಡ್ಪು, ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ತೇಜಸ್ವಿ ಕಡಪಳ ಉಪಸ್ಥಿತರಿದ್ದರು.


ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ತೇಜಸ್ವಿ ಕಡಪಳ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸಂಜಯ್ ನೆಟ್ಟಾರು ವಂದಿಸಿದರು. ಪೈಲಾರು ಮಿತ್ರ ವೃಂದದ ಅಧ್ಯಕ್ಷ ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು. ಯುವಜನ ಸಂಯುಕ್ತ ಮಂಡಳಿಯ ಗೌರವ ಸಲಹೆಗಾರರು, ಪದಾಧಿಕಾರಿಗಳು ಹಾಗೂ ನಿರ್ದೇಶಕರು ಸಹಕರಿಸಿದರು.

ರಾಜ್ಯ