
ಸುಳ್ಯದಲ್ಲಿ ಕಳೆದ 20 ವರ್ಷಗಳಿಂದ ಇಲೆಕ್ಟ್ರಾನಿಕ್ ವಸ್ತುಗಳು ಮತ್ತು ಸೋಲಾರ್ ವಾಟರ್ ಹೀಟರ್ ಸೇರಿದಂತೆ ಗೃಹೋಪಯೋಗಿ ಸಾಮಾಗ್ರಿಗಳ ಮಾರಾಟಗಾರರೂ ಹಾಗೂ ಸರ್ವಿಸ್ ಕೆಲಸವನ್ನು ಮಾಡುತ್ತಿರುವ ರೋಷನ್ ಸುಳ್ಯ ಮಾಲಕತ್ವದ ಜೆ.ಎಂ. ಜೆ .ಇಲೆಕ್ಟ್ರಾನಿಕ್ ಹಾಗೂ ಸರ್ವಿಸ್ ಸೆಂಟರ್ ಸುಳ್ಯದ ಆಯುರ್ವೇದ ಕಾಲೇಜಿನ ಎದುರಿನ ಬೆಳ್ಳಿಪ್ಪಾಡಿ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡು ಶುಭಾರಂಭಗೊಂಡಿತು .


ಸಂಸ್ಥೆಯನ್ನು ಸುಳ್ಯ ಚರ್ಚ್ ಧರ್ಮಗುರು ಫಾದರ್ ವಿಕ್ಟರ್ ಡಿಸೋಜಾ ಉದ್ಘಾಟಿಸಿ ಶುಭ ಹಾರೈಸಿದರು , ಈ ಸಂದರ್ಭದಲ್ಲಿ ಬ್ರೀಜ್ ದೇವರಡ್ಕ, ಎಸ್ ಟಿ ವಿಮಾ, ರವಿ, ರಾಕೇಶ್ ಕ್ರಾಸ್ತಾ, ಸೆಬಾಸ್ಟಿನ್ ಕ್ರಾಸ್ತಾ, ರಾಬರ್ಟ್ ಡಿಸೋಜಾ,ಬೇಬಿ ಅನ್ವಿ, ಶ್ರೇಯಾ ಡಿಸೋಜಾ ಮೊದಲಾದವರು ಉಪಸ್ತಿತರಿದ್ದರು, ಈ ಸಂದರ್ಭದಲ್ಲಿ ಸಂಸ್ಥೆ ಮಾಲಕ ರೋಷನ್ ಮಾತನಾಡಿ,ನಮ್ಮಲ್ಲಿ ಎಲ್ಲಾ ತರದ ಇಲೆಕ್ಟ್ರಾನಿಕ್ ಸಾಮಾಗ್ರಿ ಸೋಲರ್ ವಾಟರ್ ಹೀಟರ್, ಸೋಲಾರ್ ಸಿಸ್ಟಮ್, ಹಾಗೂ ಸಿಸಿ ಕ್ಯಾಮರಗಳನ್ನು ಅಳವಡಿಸಿ ಹಾಗೂ ದುರಸ್ತಿ ಮಾಡಿ ಕೊಡಲಾಗುವುದು ಎಂದು ಹೇಳಿದರು.
