
ಸುಳ್ಯ ಬಾಯ್ಸ್ ತಂಡದಿಂದ ನಿರ್ಮಾಣಗೊಂಡ ಕಿರುಚಿತ್ರ ಲವ್ ಮೈನಸ್18 ಸುಳ್ಯದ ಎ ಪಿ ಎಂ ಸಿ ಹಾಲ್ ನಲ್ಲಿ ಬಿಡುಗಡೆ ಸುಳ್ಯದ ಆಸುಪಾಸಿನ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡ, ಈ ಚಿತ್ರದಲ್ಲಿ ಸುಳ್ಯದ ಹೆಸರಾಂತ ನಟ ಜೀವನ್ ಕೆರೆಮೂಲೆ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ,ಉಳಿದಂತೆ ಪ್ರಸಾದ್ ಕಾಟೂರು ಹಾಗೂ ಇನ್ನಿತರ ಯುವ ನಟ ನಟಿಯರು ಈ ಚಿತ್ರದಲ್ಲಿ ರೋಮಾಂಚಕ ಪಾತ್ರದಲ್ಲಿ ಕಂಡುಬಂದಿದ್ದಾರೆ. ಶ್ರೀ ಟೆಕ್ನಾಲಜಿ ಸುಳ್ಯ ನಿರ್ಮಾಣ, ಚಿದಾನಂದ್ ಪರಪ್ಪರ ಕಥೆ ನಿರ್ದೇಶನ, ಯಶ್ ಫೋಟೋಗ್ರಫಿ ಕಲ್ಲುಗುಂಡಿ ಇವರ ಛಾಯಗ್ರಹಣದಲ್ಲಿ, ಹಾಗೂ ಇನ್ನಿತರ ಅದ್ಭುತ ಸಹ ಕಲಾವಿದರ ನಟನೆಯಲ್ಲಿ ಮೂಡಿಬಂದ ಲವ್ ಮೈನಸ್ 18 ಚಿತ್ರ ಅಗಸ್ಟ್ 26 ರಂದು ಸುಳ್ಯದ ಎ ಪಿ ಎಂ ಸಿ ಹಾಲ್ ನಲ್ಲಿ ಸಂಜೆ 6 ಗಂಟೆಗೆ ಬಿಡುಗಡೆಗೊಳ್ಳುತ್ತಿದೆ,ಇದರ ಪ್ರೀಮಿಯರ್ ಶೋ ಇಂದೇ ಎ ಪಿ ಎಂ ಸಿ ಹಾಲ್ ನಲ್ಲಿ ನಡೆಯಲಿದೆ, ಚಿತ್ರತಂಡ ಎಲ್ಲಾ ಕಲಾ ರಸಿಕರನ್ನು, ಸಿನಿಮಾಸಕ್ತರನ್ನು, ಬಿಡುಗಡೆ ಸಮಾರಂಭಕ್ಕೆ ಮತ್ತು ಪ್ರೀಮಿಯರ್ ಶೋ ವೀಕ್ಷಿಸಲು ತಂಡ ಆಹ್ವಾನಿಸಿದೆ.
