
ಮುರುಳ್ಯ ಗ್ರಾಮದ ನಟ್ಟಿಹಿತ್ಲು ದಿ. ಶ್ರೀ ಉಕ್ಕಣ್ಣ ಗೌಡ ಮತ್ತು ಶ್ರೀಮತಿ ಪೂವಮ್ಮ ಇವರ ಸ್ಮರಣಾರ್ಥ ಶ್ರೀಮತಿ ಮತ್ತು ಶ್ರೀ ಗೋಪಾಲಕೃಷ್ಣ ಮತ್ತು ಮಕ್ಕಳು, ಶ್ರೀಮತಿ ಮತ್ತು ಶ್ರೀ ಸೀತಾರಾಮ ಗೌಡ ಮತ್ತು ಮಕ್ಕಳು ಇವರು ಕೊಡುಗೆಯಾಗಿ ನೀಡಿದ ಪ್ರಯಾಣಿಕರ ತಂಗುದಾಣ ನಟ್ಟಿಹಿತ್ಲು ಇದರ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ಜರುಗಿತು.


ಈ ಪ್ರಯಾಣಿಕರ ತಂಗುದಾಣದ ಉದ್ಘಾಟನೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ನೆರವೇರಿಸಿದರು. ಪ್ರಯಾಣಿಕರ ಅನುಕೂಲಕ್ಕೆ ತಂಗುದಾಣ ನಿರ್ಮಿಸಿಕೊಟ್ಟ ದಾನಿಗಳಿಗೆ ಧನ್ಯವಾದ ಹೇಳಿದರು. ಇಂತಹ ಸಮಾಜಮುಖಿ ಕೆಲಸ ಎಲ್ಲರಿಗೂ ಮಾದರಿಯಾಗಿ ಇನ್ನಷ್ಟು ಸಮಾಜಕ್ಕೆ ಪ್ರೇರಣೆಯಾಗಲಿ. ನಮ್ಮ ತಾಲೂಕಿನ ಬೇರೆ ಬೇರೆ ಸ್ಥಳಗಳಲ್ಲಿ ದಾನಿಗಳ ಸಹಕಾರದಿಂದ ಇಂತಹ ಕಾರ್ಯಗಳು ನಡೆಯಲಿ ಎಂದು ಹಾರೈಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ವನಿತಾ ಬಾಮೂಲೆ, ವಸಂತ ನಡುಬೈಲು, ಕೊರಗಪ್ಪ ಗೌಡ, ಮೋನಪ್ಪ ಗೌಡ ಕಡೀರ, ಭಾಸ್ಕರ ಗೌಡ ನಳಿಯಾರು, ಹರ್ಷನ್ ಕೆ ಟಿ, ಚಿತ್ರಾ ಕೊಡಿಯಾಲ ಹಾಗೂ ಈ ಸಂದರ್ಭದಲ್ಲಿ ದಾನಿಗಳ ಕುಟುಂಬಸ್ಥರು, ಸ್ಥಳೀಯ ಜನಪ್ರತಿನಿದಧಿಗಳು, ಪ್ರಮುಖರು, ಗ್ರಾಮಸ್ಥರು ಉಪಸ್ಥಿತರಿದ್ದರು.

